ಕೆನಡಾದಲ್ಲಿ ಎರಡು ಸಮುದಾಯದ ನಡುವೆ ಘರ್ಷಣೆ, ಚೂರಿ ಇರಿತ: 10 ಮಂದಿಯ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೆನಡಾದ ಸಸ್ಕಾಚೆವಾನ್ ಪ್ರಾಂತ್ಯದಲ್ಲಿ ಎರಡು ಸಮುದಾಯಗಳ ನಡುವಿನ ಘರ್ಷಣೆ ಸಂಭವಿಸಿದ್ದು ಸರಣಿ ಚೂರಿ ಇರಿತದ ಪ್ರಕರಣಗಳು ನಡೆದಿವೆ. ಇರಿತಕ್ಕೊಳಗಾಗದವರಲ್ಲಿ 10 ಮಂದಿ ಸಾವನ್ನಪ್ಪಿದ್ದು 15 ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಜೇಮ್ಸ್ ಸ್ಮಿತ್ ಕ್ರೀ ನೇಷನ್‌ನಲ್ಲಿ ಮತ್ತು ಸಾಸ್ಕಾಟೂನ್‌ನ ಈಶಾನ್ಯದಲ್ಲಿರುವ ವೆಲ್ಡನ್ ಗ್ರಾಮದಲ್ಲಿ ಅನೇಕ ಸ್ಥಳಗಳಲ್ಲಿ ಇರಿತಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

ಇಬ್ಬರು ಶಂಕಿತರನ್ನು ಕೆನಡಾಪೋಲೀಸರು ಹಿಡಿದಿದ್ದು ಇದು ಆಧುನಿಕ ಕೆನಡಾದ ಇತಿಹಾಸದಲ್ಲಿ ನಡೆದ ಭೀಕರ ಸಾಮೂಹಿಕ ಹತ್ಯೆಗಳಲ್ಲಿ ಒಂದಾಗಿದೆ.

“ಸಾಸ್ಕಾಚೆವಾನ್‌ನಲ್ಲಿ ಇಂದು ನಡೆದ ದಾಳಿಗಳು ಭಯಾನಕ ಮತ್ತು ಹೃದಯವಿದ್ರಾವಕವಾಗಿವೆ. ಪ್ರೀತಿಪಾತ್ರರನ್ನು ಕಳೆದುಕೊಂಡವರು ಮತ್ತು ಗಾಯಗೊಂಡವರ ಬಗ್ಗೆ ನಾನು ಯೋಚಿಸುತ್ತಿದ್ದೇನೆ” ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ತಿಳಿಸಿದ್ದಾರೆ.

ಪೊಲೀಸರು ಇಬ್ಬರು ಶಂಕಿತರನ್ನು ಡೇಮಿಯನ್ ಸ್ಯಾಂಡರ್ಸನ್, 31, ಮತ್ತು ಮೈಲ್ಸ್ ಸ್ಯಾಂಡರ್ಸನ್, 30 ಎಂದು ಹೆಸರಿಸಿದ್ದಾರೆ, ಅವರು ಫೋಟೋಗಳು ಮತ್ತು ವಿವರಣೆಗಳನ್ನು ಒದಗಿಸಿದ್ದಾರೆ. ಆದರೆ ಅವರ ಉದ್ದೇಶಗಳೇನಿರಬಹುದು ಎಂಬುದು ಇನ್ನೂ ಪತ್ತೆಯಾಗಿಲ್ಲ. ಕೆಲವರನ್ನು ಗುರಿ ಮಾಡಿ ಕೊಲ್ಲಲಾಗಿದ್ದು ಇನ್ನು ಕೆಲವರನ್ನು ಉದ್ದೇಶವಿಲ್ಲದೇ ಕೊಲ್ಲಲಾಗಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!