ಹೊಸದಿಗಂತ ವರದಿ, ಯಾದಗಿರಿ :
ಜಿಲ್ಲೆಯ ಶಹಾಪೂರ ತಾಲೂಕಿನ ದೋರನಳ್ಳಿ ಗ್ರಾಮದಲ್ಲಿ ಸೀಮಂತ ಕಾರ್ಯಕ್ರಮ ನಡೆಯುವ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಮಡು 28 ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ. ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪ್ ನಲ್ಲಿ ಘಟನೆ.ನಡೆದಿದ್ದು, ಮನೆಯಲ್ಲಿ ಸೀಮಂತ ಕಾರ್ಯಕ್ರಮ ಇದ್ದ ಕಾರಣ ಅಡಿಗೆ ತಯಾರಿ ನಡೆದಿತ್ತು
ಈ ವೇಳೆ ಸಿಲಿಂಡರ್ ಸ್ಪೋಟಗೊಂಡಿದ್ದು, ಸ್ಪೋಟದ ತೀವೃತೆಗೆ ಅಕ್ಕಪಕ್ಕದಲ್ಲಿನ ಮನೆಗಳ ಗೋಡೆಗಳು ಬಿರುಕುಗೊಂಡ ಬಗ್ಗೆ ವರದಿಯಗಿವೆ. .
ಗಾಯಾಳುಗಳಲ್ಲಿ 8 ಜನರ ಸ್ಥಿತಿ ಗಂಭೀರವಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದವರನ್ನು ಶಹಾಪೂರ ಆಸ್ಪತ್ರೆಗೆ ಸೇರಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕ ವೆಂಕಟರಡ್ಡಿ ಮುದ್ನಾಳ್ ಹಾಗೂ ಎಸ್.ಪಿ.ವೇದಮೂರ್ತಿ ದೌಡಾಯಿಸಿದ್ದು ಪರಸ್ತಿತಿಯನ್ನು ಅವಲೋಕಿಸಿದ್ದಾರೆ.