ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡ ಬನವಾಸಿ ಯುವಕ: ರಕ್ಷಣೆಗೆ ಮನವಿ

ಹೊಸದಿಗಂತ ವರದಿ, ಬನವಾಸಿ:

ಇಲ್ಲಿನ ಹೊಸಪೇಟೆ ರಸ್ತೆಯ ನಿವಾಸಿ ಇಮ್ರಾನ್ ನಜೀರ್ ಅಲ್ತಾಫ್ ಚೌದರಿ(21) ಎಂಬ ವಿದ್ಯಾರ್ಥಿ ಯುದ್ದ ಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡಿದ್ದು ಪೋಷಕರು ಆತನನ್ನು ಶೀಘ್ರವಾಗಿ ಭಾರತಕ್ಕೆ ಕರೆತರಲು ಸಹಾಯ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬನವಾಸಿಯ ಗ್ರಾಮ ಪಂಚಾಯತಿಯ ಸದಸ್ಯ ಅಲ್ತಾಫ್ ಚೌದರಿ ಅವರ ಮಗನಾದ ಇಮ್ರಾನ್ ಕಳೆದ ಮೂರು ವರ್ಷಗಳಿಂದ ವಿನಿಶಿಯಾ ನಗರದ ನ್ಯಾಶನಲ್ ಮೆಮೋರಿಯಲ್ ಪ್ರಿಗೋವ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ವ್ಯಾಸಂಗ ಮಾಡುತ್ತಿದ್ದಾರೆ. ಉಕ್ರೇನ್ ದೇಶದ ಮಧ್ಯ ಪ್ರಾಂತ್ಯದ ವಿನಿಶಿಯಾ ನಗರದ ಹಾಸ್ಟೆಲ್ ನಲ್ಲಿ ಸದ್ಯ 22 ಭಾರತೀಯ ವಿದ್ಯಾರ್ಥಿಗಳೊಂದಿಗೆ ಸುರಕ್ಷಿತವಾಗಿ ಇರುವುದಾಗಿ ಮತ್ತು ಕಟ್ಟಡದಿಂದ ಹೊರಕ್ಕೆ ತೆರಳಲು ಬಿಡುತ್ತಿಲ್ಲ. ನಿನ್ನೆಯೇ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದಾಗಿ ತಿಳಿಸಿದ್ದು, ನಗರದ್ಯಾಂತ ಕರ್ಪ್ಯೂ ವಿಧಿಸಲಾಗಿದೆ. ಪೋಲಿಸರು ಗಸ್ತು ತಿರುಗುತ್ತಿದ್ದಾರೆ. ಯುದ್ದ ನಡೆಯುತ್ತಿರುವ ದೇಶದ ರಾಜಧಾನಿ ಕೀವ್ ನಿಂದಾ 400ಕಿ.ಮೀ ದೂರದಲ್ಲಿ ನಾವು ಇದ್ದೆವೆ. ಪ್ರತಿ ಮೂವತ್ತು ನಿಮಿಷಗಳಿಗೆ ಸೈರನ್ ಸದ್ದು ಕೇಳಿಸುತ್ತದೆ. ಈ ಸಂದರ್ಭದಲ್ಲಿ ಆತಂಕ ಮೂಡುತ್ತಿದೆ ಎಂದು ಮಗ ದೂರವಾಣಿಯ ಮೂಲಕ ತಿಳಿಸಿದ್ದಾನೆ ಎಂದು ಇಮ್ರಾನ್ ತಂದೆ ಅಲ್ತಾಫ್ ಚೌದರಿ ‘ಹೊಸದಿಗಂತ’ಕ್ಕೆ ತಿಳಿಸಿದ್ದಾರೆ. ಮಗನನ್ನು ಶೀಘ್ರವಾಗಿ ಭಾರತಕ್ಕೆ ಕರೆತನ್ನಿ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!