ದಿನಭವಿಷ್ಯ| ಆಪ್ತರ ಭಾವನೆ ಅರ್ಥ ಮಾಡಿಕೊಂಡು ವ್ಯವಹರಿಸಲು ಸಫಲರಾಗುವಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಚಿಂತನೆಯಲ್ಲಿ ಸ್ಥಿರತೆ ತೋರುವಿರಿ. ಆಪ್ತರ ಭಾವನೆ ಅರ್ಥ ಮಾಡಿಕೊಂಡು ವ್ಯವಹರಿಸಲು ಸಫಲರಾಗುವಿರಿ. ಉತ್ಸಾಹಪೂರ್ಣ ದಿನ.

ವೃಷಭ
ಅನುಭವಗಳಿಂದ ಪಾಠ ಕಲಿಯುವ ದಿನವಿದು.  ವೈಫಲ್ಯವು ಉತ್ತಮ ಪಾಠ ಕಲಿಸುತ್ತದೆ.  ಎಲ್ಲವನ್ನೂ ಕುರುಡಾಗಿ ನಂಬಬೇಡಿ. ವಿವೇಚನೆ ಒಳ್ಳೆಯದು.

ಮಿಥುನ
ನಿಮ್ಮನ್ನು ಹಿನ್ನಡೆಗೆ ತಳ್ಳಲು ಕೆಲವರಿಂದ ಯತ್ನ. ಅದನ್ನು ವಿಫಲಗೊಳಿಸಲು ಯೋಜನೆ ರೂಪಿಸಿ. ಕೆಲಸದ ಒತ್ತಡದಿಂದ ತಲೆನೋವು ಸಂಭವ.

ಕಟಕ
ಒತ್ತಡದ ಪ್ರಸಂಗದಲ್ಲಿ ಕ್ಷಿಪ್ರ ನಿರ್ಧಾರ ತಾಳಲು ಸಫಲರಾಗುವಿರಿ. ಇದರಿಂದ ಸಮಸ್ಯೆ  ಸಕಾಲದಲ್ಲಿ ಪರಿಹಾರ. ಬಾಂಧವ್ಯ ಉಳಿಸಿಕೊಳ್ಳುವಿರಿ.

ಸಿಂಹ
ಕೆಲಸದ ಒತ್ತಡ ಅಧಿಕ. ಆದರೂ ಅದನ್ನು ನಿಭಾಯಿಸುವಲ್ಲಿ ಸಫಲ. ಇತರರಿಗೆ ಹುಸಿ ಭರವಸೆ ನೀಡಬೇಡಿ. ನಿಮ್ಮ ಮೇಲಿನ ವಿಶ್ವಾಸ ಕಳಕೊಂಡಾರು.

ಕನ್ಯಾ
ಪ್ರತಿಕೂಲ ಸನ್ನಿವೇಶವನ್ನು ನಿಮಗೆ ಪೂರಕವಾಗಿ ಬದಲಿಸಲು ಸಫಲತೆ ಕಾಣುವಿರಿ.  ಕಾರ್ಯವು ಸಕಾಲದಲ್ಲಿ ಪೂರ್ಣ. ಹಣದ ವಿಷಯದಲ್ಲಿ ಮಾತ್ರ ಅಸಂತೃಪ್ತಿ.

ತುಲಾ
ಮನೆಯಲ್ಲೂ ಕಚೇರಿಯಲ್ಲೂ ಹೆಚ್ಚಿನ ಜವಾಬ್ದಾರಿ. ಆರ್ಥಿಕವಾಗಿ ಪ್ರಮುಖ ನಿರ್ಧಾರ ತಾಳಬೇಕಾದ ಅನಿವಾರ್ಯತೆ. ಬಂಧುಗಳ ಸಹಕಾರ.

ವೃಶ್ಚಿಕ
ಸವಾಲಿನ ದಿನ. ಪ್ರಮುಖ ವಿಷಯದಲ್ಲಿ ಅಡೆತಡೆ ಬಾಧಿಸುವುದು. ಅದನ್ನು ನಿಭಾಯಿಸಲು ಸಫಲರಾಗುವಿರಿ. ಬಂಧುಗಳಿಂದ ಅಸಹಕಾರ ಎದುರಿಸುವಿರಿ.

ಧನು
ಪ್ರೀತಿಪಾತ್ರರ ಮನಸ್ಸು ಗೆಲ್ಲುವಂತಹ ನಿರ್ವಹಣೆ ತೋರುವಿರಿ. ವಿಶ್ವಾಸ ವೃದ್ಧಿ. ವ್ಯವಹಾರದಲ್ಲಿ ಉತ್ತಮ ಸಂವಹನ ಸಾಮರ್ಥ್ಯ ಪ್ರದರ್ಶಿಸುವಿರಿ.

ಮಕರ
ಸಂಜೆ ವೇಳೆಗೆ ಪ್ರಮುಖ ಕೆಲಸ ಮುಗಿಸಬೇಕಾದ ಒತ್ತಡ. ಬಂಧುಗಳ ವಿಷಯದಲ್ಲಿ ಭಾವನಾತ್ಮಕ ತಳಮಳ. ಹರಿತ ವಸ್ತು ಬಳಸುವಾಗ ಎಚ್ಚರವಿರಲಿ.

ಕುಂಭ
ಆತ್ಮೀಯ ಬಂಧುವಿನ ಜತೆ ಮನಸ್ತಾಪ ನಡೆದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಪರಸ್ಪರ ಸಂವಹನ ಅತ್ಯವಶ್ಯ.

ಮೀನ
ಹೆಚ್ಚಿನ ಜವಾಬ್ದಾರಿ ಹೇರಲ್ಪಡುವುದು. ಅದರ ಕುರಿತು ಕೊರಗಬೇಡಿ. ಅದನ್ನು ನಿಭಾಯಿಸಿ. ವಿವಾಹಿತರಿಗೆ ಸಂತೋಷದ ಸುದ್ದಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!