ಟ್ವಿಟರ್ ಗೆ ಆಪಲ್ App ಸ್ಟೋರ್ ನಿಂದ ಗೇಟ್ ಪಾಸ್??

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟ್ವಿಟರ್ ಒಡೆಯನಿಗೆ ಮತ್ತೊಂದು ಅಗ್ನಿಪರೀಕ್ಷೆ ಎದರುರಾಗಿದೆಯೇ?
ಜಾಗತಿಕ ದಿಗ್ಗಜ ಆಪಲ್ ತನ್ನ App ಸ್ಟೋರ್‌ನಿಂದ ಟ್ವಿಟ್ಟರ್ ಗೆ ಗೇಟ್ ಪಾಸ್ ನೀಡಲಿದೆಯೇ? ಸಂಸ್ಥೆ ಮಾತ್ರ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ ಟ್ವಿಟರ್ ಒಡೆಯ ಎಲಾನ್ ಮಸ್ಕ್, ಟ್ವಿಟರನ್ನು ನಿರ್ಬಂಧಿಸುವುದಾಗಿ ಆಪಲ್ ಬೆದರಿಕೆ ಹಾಕಿದೆ ಎಂದು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿಯೇ ಬರೆದುಕೊಂಡಿರುವ ಅವರು, ಈ ನಿರ್ಬಂಧ ಹೇರಲು ಕಾರಣವೇನು ಎಂಬುದನ್ನೇ ತಿಳಿಸಿಲ್ಲ ಎಂದು ಗೋಳು ತೋಡಿಕೊಂಡಿದ್ದಾರೆ!

ಆಪಲ್ ಕಂಪನಿ ಈಗಾಗಲೇ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಮ್ಮ ಜಾಹೀರಾತು ನೀಡುವುದನ್ನು ನಿಲ್ಲಿಸಿದೆ. ಜೊತೆಗೆ ಆಪ್ ಸ್ಟೋರ್‌ನಿಂದ ಟ್ವಿಟ್ಟರ್ ಅನ್ನು ತೆಗೆದುಹಾಕುವುದಾಗಿ ಬೆದರಿಕೆ ಒಡ್ಡಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!