ಎಲ್ ಸಾಲ್ವಡಾರ್‌ ನಲ್ಲಿ ಚಾಪರಾಸ್ಟಿಕ್ ಜ್ವಾಲಾಮುಖಿ ಸ್ಫೋಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಎಲ್ ಸಾಲ್ವಡಾರ್‌ನ ದೇಶದ ಪೂರ್ವದಲ್ಲಿರುವ ಚಾಪರ್ರಾಸ್ಟಿಕ್ ಜ್ವಾಲಾಮುಖಿಯು ಸೋಮವಾರದಿಂದ ಸ್ಫೋಟಗೊಳ್ಳಲು ಪ್ರಾರಂಭಿಸಿದ್ದು, ನಿವಾಸಿಗಳಿಗೆ ಎಚ್ಚರವಾಗಿರುವಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ರಾಜಧಾನಿಯಿಂದ ಪೂರ್ವಕ್ಕೆ ಸುಮಾರು 83 ಮೈಲುಗಳಷ್ಟು (135 ಕಿಲೋಮೀಟರ್) ದೂರದಲ್ಲಿರುವ ಜ್ವಾಲಾಮುಖಿಯ ಕೇಂದ್ರ ಕುಳಿಯಲ್ಲಿ ಸ್ಫೋಟಗಳನ್ನು ಪರಿಸರ ಸಚಿವಾಲಯದ ವೀಕ್ಷಣಾಲಯವು ವರದಿ ಮಾಡಿದೆ. ಸ್ಫೋಟದ ತೀವ್ರತೆಯು 8 ರವರೆಗಿನ ಪರಿಮಾಣದಲ್ಲಿ ಒಂದರಷ್ಟಿದೆ ಎಂದು ಅದು ಹೇಳಿದೆ.
ಸ್ಫೋಟವು ಪ್ರಾರಂಭವಾಗುತ್ತಿದ್ದಂತೆ ಜ್ವಾಲಾಮುಖಿಯು ಕುಳಿಯ ಸುತ್ತಮುತ್ತಲಿನ ಪ್ರದೇಶಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಕಲ್ಲು ಮತ್ತು ಬೂದಿ ಹಾರಿಬಂದು ಬಿದ್ದಿದೆ. ಯಾವುದೇ ಗಾಯಗಳು ವರದಿಯಾಗಿಲ್ಲ.
ಮೂರು ಪುರಸಭೆಗಳು ಅಲರ್ಟ್ ಆಗಿವೆ ಎಂದು ನಾಗರಿಕ ರಕ್ಷಣಾ ನಿರ್ದೇಶಕ ಲೂಯಿಸ್ ಅಲೋನ್ಸೊ ಅಮಯಾ ಹೇಳಿದ್ದಾರೆ. ಅಧಿಕಾರಿಗಳು 10,000 ಕ್ಕೂ ಹೆಚ್ಚು ಜನರಿಗೆ ಅವಕಾಶ ಕಲ್ಪಿಸುವ 26 ಆಶ್ರಯತಾಣಗಳ ಸಿದ್ದತೆಯಲ್ಲಿ ತೊಡಗಿದ್ದಾರೆ. ಜ್ವಾಲಾಮುಖಿಯ ಚಟುವಟಿಕೆಯ ಪ್ರಸ್ತುತ ಮಾಹಿತಿಯನ್ನು ಒದಗಿಸಲು ಕಮಾಂಡ್ ಪೋಸ್ಟ್ ಅನ್ನು ಸ್ಥಾಪಿಸಲಾಗಿದೆ. ಸುರಕ್ಷತಾ ವಲಯವನ್ನು ಕುಳಿಯಿಂದ 3.7 ಮೈಲಿ (6 ಕಿಲೋಮೀಟರ್) ತ್ರಿಜ್ಯಕ್ಕೆ ವಿಸ್ತರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!