ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಸ್ಥಾನದಿಂದ ರಮೀಜ್ ರಾಜಾಗೆ ಗೇಟ್ ಪಾಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾಕ್ ಸತತ ಸೋಲು ಅನುಭವಿಸುತ್ತಿದ್ದು, ಮತ್ತೊಂದೆಡೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ (PCB chief) ರಮೀಜ್ ರಾಜಾ ಅವರ ಕುರ್ಚಿ ಅಲುಗಾಡುತ್ತಿದೆ.

ಕೆಲವು ದಿನಗಳಿಂದ ರಮೀಜ್ ರಾಜಾ ನಾನಾ ಹೇಳಿಕೆಗಳ ಮೂಲಕ ಸುದ್ದಿಯಲ್ಲಿದ್ದು, ಇದೀಗ ಪಿಸಿಬಿ ಮುಖ್ಯಸ್ಥ ಸ್ಥಾನದಿಂದ ಅವರನ್ನು ಕಿತ್ತೊಗೆಯುವ ಸಾಧ್ಯತೆಗಳು ದಟ್ಟವಾಗಿದೆ.

ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ನಜಮ್ ಸೇಥಿಅವರನ್ನು ಮತ್ತೊಮ್ಮೆ ಈ ಹುದ್ದೆಗೆ ನೇಮಿಸಲು ಮನಸ್ಸು ಮಾಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಹೀಗಾಗಿ ರಮೀಜ್ ರಾಜಾ ಅವರ ಅಧಿಕಾರ ಅಂತ್ಯವಾಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ.

ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಪಿಸಿಬಿ ಮಾಜಿ ಅಧ್ಯಕ್ಷ ನಜಮ್ ಸೇಥಿ ಅವರು ಡಿಸೆಂಬರ್ 17 ರಂದು ಲಾಹೋರ್‌ನಲ್ಲಿ ಪಾಕಿಸ್ತಾನದ ಪ್ರಧಾನಿ ಷರೀಫ್ ಅವರನ್ನು ಭೇಟಿ ಮಾಡಿದ್ದು, ಅವರಿಗೆ ಪಾಕ್ ಕ್ರಿಕೆಟ್​ ಮಂಡಳಿ ಮುಖ್ಯಸ್ಥ ಪಟ್ಟ ಕಟ್ಟುವುದು ನಿಶ್ವಿತ ಎಂದು ವರದಿಯಾಗಿದೆ. ಇದಕ್ಕೆ ಪೂರಕವೆಂಬಂತೆ ಪಾಕಿಸ್ತಾನದ ಪ್ರಧಾನಿ ಕ್ರಿಕೆಟ್ ಮಂಡಳಿಯ ಪೋಷಕರಾಗಿರುವುದರಿಂದ ಮಂಡಳಿಯ ಅಧ್ಯಕ್ಷರ ನೇಮಕಾತಿಯ ಅಂತಿಮ ನಿರ್ಧಾರವನ್ನು ಪ್ರಧಾನಿಯ ತೆಗೆದುಕೊಳ್ಳುತ್ತಾರೆ. ಹೀಗಾಗಿ ಸೇಥಿಯವರ ಪ್ರಧಾನಿ ಭೇಟಿಯೂ ಅಧ್ಯಕ್ಷರ ಬದಲಾವಣೆಗೆ ಪುಷ್ಠಿ ನೀಡಿದೆ.

ರಮೀಜ್ ರಾಜಾ ಅವರನ್ನು 2021 ರಲ್ಲಿ ಪಾಕಿಸ್ತಾನಿ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!