Friday, March 24, 2023

Latest Posts

ದಾಂಪತ್ಯ ಜೀವನಕ್ಕೆ ಕಾಲಿಟ್ಟ`ಗಟ್ಟಿಮೇಳ’ ನಟಿ ಪ್ರಿಯಾ-ನಟ ಸಿದ್ದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

`ಗಟ್ಟಿಮೇಳ’ (Gattimela) ನಟಿ ಪ್ರಿಯಾ ಆಚಾರ್ (Priya Achar) ಮತ್ತು `ಪಾರು’ (Paaru) ನಟ ಸಿದ್ದು ಮೂಲಿಮನಿ (Siddu Moolimani) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹಲವು ವರ್ಷಗಳ ಪ್ರೀತಿಗೆ ಇದೀಗ ಸಿದ್ದು-ಪ್ರಿಯಾ ಮದುವೆಯೆಂಬ (Wedding) ಮುದ್ರೆ ಒತ್ತಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಭಾನುವಾರ (ಫೆ.12)ರಂದು ಪಾರು ನಟ ಸಿದ್ದು- ʻಗಟ್ಟಿಮೇಳʼ ಖ್ಯಾತಿಯ ನಟಿ ಪ್ರಿಯಾ ಆಚಾರ್ ಹಸೆಮಣೆ ಏರಿದ್ದಾರೆ. ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಮದುವೆಯಾಗಿದ್ದಾರೆ. ಈ ಮದುವೆ ಸಂಭ್ರಮಕ್ಕೆ `ಗಟ್ಟಿಮೇಳ’ ಮತ್ತು `ಪಾರು’ ಸೀರಿಯಲ್ ತಂಡ ಸಾಕ್ಷಿಯಾಗಿದೆ.

ಫೆ.14ರಂದು ದಾವಣಗೆರೆಯಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!