ಗೌರಿ ಗಣೇಶ ಹಬ್ಬ: ಬೆಂಗಳೂರು ಪೊಲೀಸ್ ಇಲಾಖೆಯಿಂದ ಗೈಡ್‌ಲೈನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೆರಡು ದಿನಗಳಲ್ಲಿ ನಾಡಿನಾದ್ಯಂತ ಸಂಭ್ರಮದ ಗೌರಿ ಗಣೇಶ ಹಬ್ಬ ಆಚರಣೆ ನಡೆಯಲಿದ್ದು, ಬೆಂಗಳೂರು ಪೊಲೀಸ್ ಇಲಾಖೆ ಈ ಬಗ್ಗೆ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. ಗಣೇಶ ಕೂರಿಸುವ ಸ್ಥಳ, ವಿಚಾರದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕ್ರಮ ಕೈಗೊಳ್ಳಲು ಪೊಲೀಸರು ಗೈಡ್‌ಲೈನ್ಸ್ ಬಿಡುಗಡೆ ಮಾಡಿದ್ದಾರೆ.

ಗೈಡ್‌ಲೈನ್ಸ್ ಇಂತಿದೆ..

  • ಸಾರ್ವಜನಿಕ ಸ್ಥಳದಲ್ಲಿ ಗಣಪತಿ ಕೂರಿಸುವುದಾದರೆ ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು.
  • ವಿವಾದಿತ ಸ್ಥಳಗಳಲ್ಲಿ ಗಣೇಶನ ಪ್ರತಿಷ್ಠಾಪನೆಗೆ ನಿಷೇಧ.
  • ಪೆಂಡಾಲ್, ಚಪ್ಪರ ಹಾಗೂ ಶಾಮಿಯಾನ ಹಾಕಲು ವಿಶೇಷ ಅನುಮತಿ
  • ಬೆಂಕಿ ನಂದಿಸುವ ಸಾಧನ ಹಾಗೂ ಸಿಸಿಟಿವಿ ಕಡ್ಡಾಯ
  • ಕಾನೂನು ಬಾಹಿರವಾಗಿ ಹಣ ಸಂಗ್ರಹಣೆ ಮಾಡುವಂತಿಲ್ಲ
  • ಮೆರವಣಿಗೆ ವೇಳೆ ಏನೇ ತೊಂದರೆ ಎದುರಾದರೂ ಸಂಘಟಿಕರೇ ಹೊಣೆ
  • ಅಗ್ನಿ ಅವಘಡ ಸಂಭವಿಸುವ ಪದಾರ್ಥಗಳನ್ನು ಸ್ಥಳದಲ್ಲಿ ಇಡುವಂತಿಲ್ಲ
  • ಡಿಜೆ ಸೌಂಡ್ ಸಿಸ್ಟಮ್ ಬಳಕೆ ಮಾಡುವಂತಿಲ್ಲ
  • ವಿಸರ್ಜನೆ ಕಾರ್ಯಕಮಕ್ಕೆ 10 ಗಂಟೆ ಡೆಡ್‌ಲೈನ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!