FOOD| ಗಣಪನಿಗೆ ಅರ್ಪಿಸಿ ವಿಶೇಷ ನೈವೇದ್ಯ ಕೇಸರಿ ಮೋದಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗಣೇಶ ಚತುರ್ಥಿಯಂದು ಗಣಪನ ನೈವೇದ್ಯಕ್ಕೆ ವಿಶೇಷವಾದ ಕೇಸರಿ ಮೋದಕವನ್ನು ಮಾಡುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು:

ಹಾಲಿನ ಪುಡಿ
ತುಪ್ಪ
ಬಾದಾಮಿ
ಕೇಸರಿ
ದಪ್ಪ ಹಾಲು
ಸಕ್ಕರೆ
ಏಲಕ್ಕಿ ಪುಡಿ

ಮಾಡುವ ವಿಧಾನ:

* ಮೊದಲು ಹಾಲನ್ನು ಕುದಿಸಿ, ನಂತರ ಗ್ಯಾಸ್‌ ಆಫ್‌ ಮಾಡಿ ಅದಕ್ಕೆ ಕೇಸರಿ ಸೇರಿಸಿ.

* ಈಗ ನಾನ್‌ಸ್ಟಿಕ್‌ ಪ್ಯಾನ್‌ಗೆ ಕೇಸರಿ ಮಿಕ್ಸ್ ಮಾಡಿದ ಹಾಲು ಹಾಕಿ, ಅದಕ್ಕೆ ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

* ಈಗ ಬಾದಾಮಿ ಪುಡಿ ಸೇರಿಸಿ, ಅದಕ್ಕೆ ಸಕ್ಕರೆ ಪುಡಿ ಹಾಗೂ ಹಾಲಿನ ಪುಡಿ ಸೇರಿಸಿ, ಗಂಟು ಕಟ್ಟದಂತೆ ಚೆನ್ನಾಗಿ ಮಿಕ್ಸ್ ಮಾಡಿ.

* ನಂತರ ಏಲಕ್ಕಿ ಪುಡಿ ಸೇರಿಸಿ ಕಡಿಮೆ ಉರಿಯಲ್ಲಿ ಸೌಟ್‌ನಿಂದ ತಿರುಗಿಸುತ್ತಾ 15 ನಿಮಿಷ ಬೇಯಿಸಿ.

* ಮಿಶ್ರಣ ಸ್ವಲ್ಪ ಗಟ್ಟಿಯಾದಾಗ ಅದನ್ನು ಮೋದಕ ಮೌಲ್ಡ್‌ ಒಳಗಡೆ ಹಾಕಿ ತೆಗೆದು ಮೋದಕವನ್ನು ಗಣಪನಿಗೆ ಅರ್ಪಿಸಿ ನಂತರ ನೀವೂ ಸವಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!