ನಾಳೆ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರೇಶ್ವರ ದೇವಾಲಯ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಮಕರ ಸಂಕ್ರಾಂತಿ ಹಬ್ಬ ಪ್ರಾರಂಭವಾಗಲಿದೆ. ನಾಳೆ ಸೂರ್ಯರಶ್ಮಿ ಶಿವನನ್ನು ಸ್ಪರ್ಶಿಸುವ ಅದ್ಭುತ ಘಟನೆ ನಡೆಯುತ್ತದೆ.

ಸೂರ್ಯನ ಕಿರಣ ದಕ್ಷಿಣ ಪಥದಿಂದ ಉತ್ತರಕ್ಕೆ ಸಾಗುತ್ತಿದ್ದಾಗ ಶಿವನ ಮೂರ್ತಿಯನ್ನು ಸ್ಪರ್ಶಿಸುತ್ತಾನೆ. ಸಂಜೆ 5.20 ರಿಂದ 5.23 ನಿಮಿಷಗಳ ಅವಧಿಯಲ್ಲಿ ಸೂರ್ಯರಶ್ಮಿ ಶಿವನಿಗೆ ನಮಿಸುತ್ತಾನೆ. ಈ ಘಟನೆಯಿಂದ ಹೊಸ ವರ್ಷದ ಭವಿಷ್ಯ ಸೂಚಿಸಲ್ಪಡುತ್ತದೆ.

ಬೆಳಗ್ಗೆ 5 ಗಂಟೆಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ದೇವಸ್ಥಾನ ಓಪನ್ ಇರಲಿದೆ. ಸಂಜೆ ಸೂರ್ಯರಶ್ಮಿ ಲಿಂಗವನ್ನು ಸ್ಮರ್ಶಿಸಿದ ನಂತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!