​ ಗಾಯಕ್ವಾಡ್​-ಕಿಶನ್​ ಅರ್ಧಶತಕ: ಆಫ್ರಿಕಾಕ್ಕೆ 180 ರನ್​ ಟಾರ್ಗೆಟ್​ ನೀಡಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಋತುರಾಜ್​ ಗಾಯಕ್ವಾಡ್​ ಮತ್ತು ಇಶಾನ್​ ಕಿಶನ್​ರ ಅರ್ಧಶತಕ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ ಭಾರತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 179 ರನ್​ಗಳ ಸವಾಲಿನ ಮೊತ್ತ ಕಲೆಹಾಕಿದೆ.
ಮೂರನೇ ಪಂದ್ಯದಲ್ಲೂ ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬ ಬವುಮಾ ಬೌಲಿಂಗ್​ ಆಯ್ಕೆ ಮಾಡಿಕೊಂಡು, ಭಾರತಕ್ಕೆ ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಇನಿಂಗ್ಸ್​ ಆರಂಭಿಸಿದ ಯುವ ಆಟಗಾರರಾದ ಇಶಾನ್​ ಕಿಶನ್​ ಮತ್ತು ಋತುರಾಜ್​ ಗಾಯಕ್ವಾಡ್​ ಮಿಂಚಿನ ಆರಂಭ ನೀಡಿದರು.
ಗಾಯಕ್ವಾಡ್​ ಔಟಾದ ಬಳಿಕ ಬಂದ ಶ್ರೇಯಸ್​ ಅಯ್ಯರ್​ (14) ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ನಾಯಕ ರಿಷಬ್​ ಪಂತ್​(6) ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದರು. ಬಳಿಕ ದಿನೇಶ್​ ಕಾರ್ತಿಕ್​ (6) ಪಂತ್​ ಹಾದಿ ತುಳಿದರು.
ಐಪಿಎಲ್​ನಲ್ಲಿ ಮಿಂಚಿದ್ದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾ21 ಎಸೆತಗಳಲ್ಲಿ 31 ರನ್​ ಬಾರಿಸಿದರು. ದಕ್ಷಿಣ ಆಫ್ರಿಕಾ ಪರ ಡ್ವೇನ್​ ಪ್ರಿಟೋರಿಯಸ್​ 2 ವಿಕೆಟ್​ ಕಿತ್ತರೆ, ಕಗಿಸೋ ರಬಾಡಾ, ತಬ್ರೇಜ್​ ಶಂಶಿ, ಕೇಶವ್​ ಮಹಾರಾಜ್​ ತಲಾ 1 ವಿಕೆಟ್​ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!