ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳು ಗುರುವಾರ ಮೂರು ಇಸ್ರೇಲಿ ಒತ್ತೆಯಾಳುಗಳನ್ನು ಮತ್ತು ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲಿನ ದಾಳಿಯಲ್ಲಿ ಸೆರೆಹಿಡಿಯಲಾದ ಐದು ವಿದೇಶಿಯರನ್ನು ಬಿಡುಗಡೆ ಮಾಡಿದರು. ಒಟ್ಟು 8 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಜಾ ಪಟ್ಟಿಯಲ್ಲಿ ಯುದ್ಧವನ್ನು ಕೊನೆಗೊಳಿಸುವ ಗುರಿಯೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಮುಂದಾದರು. ಅದರ ಭಾಗವಾಗಿ ಹಂತ ಹಂತವಾಗಿ ಎರಡೂ ಕಡೆ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ.
ಮೊದಲು ಬಿಡುಗಡೆಯಾದ ಇಸ್ರೇಲಿ ಮಹಿಳಾ ಸೈನಿಕ ಆಗಮ್ ಬರ್ಗರ್ (20) ಪ್ಯಾಲೇಸ್ಟಿನಿಯನ್ ಪ್ರದೇಶದ ಉತ್ತರದಲ್ಲಿರುವ ಜಬಾಲಿಯಾದಲ್ಲಿ ರೆಡ್ಕ್ರಾಸ್ನ ಅಂತಾರಾಷ್ಟ್ರೀಯ ಸಮಿತಿಯ ಅಧಿಕಾರಿಗಳಿಗೆ ಹಸ್ತಾಂತರಿಸಲ್ಪಟ್ಟರು. ನಂತರ ಇಬ್ಬರು ಇಸ್ರೇಲಿಗಳು ಮತ್ತು ಐವರು ವಿದೇಶಿಯರನ್ನು ರೆಡ್ಕ್ರಾಸ್ಗೆ ಹಸ್ತಾಂತರಿಸಲಾಯಿತು.
ಜನವರಿ 25ರಂದು ಇಸ್ರೇಲ್-ಹಮಾಸ್ ಉಗ್ರರ ನಡುವಿನ ಗಾಜಾ ಪಟ್ಟಿ ಕದನ ವಿರಾಮ ಒಪ್ಪಂದದ ಅನುಸಾರ 2ನೇ ಹಂತದಲ್ಲಿ ಮತ್ತಷ್ಟು ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದರು. ಗಾಜಾದಲ್ಲಿ ಸುಮಾರು 16 ತಿಂಗಳ ಸೆರೆಯಲ್ಲಿದ್ದ ನಾಲ್ಕು ಇಸ್ರೇಲಿ ಮಹಿಳಾ ಸೈನಿಕರನ್ನು ಹಮಾಸ್ ಬಿಡುಗಡೆ ಮಾಡಿದೆ.
ಒತ್ತೆಯಾಳುಗಳಾದ ಐಡಿಎಫ್ ಸೈನಿಕರು ಲಿರಿ ಅಲ್ಬಾಗ್ (19), ಡೇನಿಯೆಲ್ಲಾ ಗಿಲ್ಬೋವಾ( 20), ಕರೀನಾ ಅರಿವ್ (20) ಮತ್ತು ನಾಮಾ ಲೆವಿ (20) ಅವರನ್ನು ಅಕ್ಟೋಬರ್ 7, 2023 ರಂದು ಹಮಾಸ್ನ ಕ್ರೂರ ದಾಳಿಯ ಸಮಯದಲ್ಲಿ ನಹಾಲ್ ಓಜ್ ನೆಲೆಯಿಂದ ಅಪಹರಿಸಲ್ಪಟ್ಟರು. ಈ ದಾಳಿ 1,200 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು.