ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್ ಉಗ್ರರ ಮೇಲೆ ಇಸ್ರೇಲ್ ಪ್ರತಿದಾಳಿ ನಡೆಸುತ್ತಿದ್ದು, ಈಗಾಗಲೇ ಸಾವಿರಕ್ಕೂ ಹೆಚ್ಚು ಹಮಾಸ್ ಉಗ್ರರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇದೀಗ ಇಸ್ರೇಲ್ ಏರ್‌ಸ್ಟ್ರೈಕ್‌ಗೆ ಗಾಜಾ ನಲುಗಿ ಹೋಗಿದೆ. ಹಮಾಸ್ ಆರ್ಥಿಕ ಸಚಿವ ಜಾವದ್ ಅಬು ಶಮಾಲ ಹತ್ಯೆಯಾಗಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಗಾಜಾ ಪಟ್ಟಿಯಲ್ಲಿನ ನಾಗರೀಕರಿಗೆ ದಾಳಿಗೆ ಮೊದಲೇ ಇಸ್ರೇಲ್ ಸೂಚನೆ ನೀಡಲಾಗಿತ್ತು. ನಮ್ಮ ದಾಳಿ ಹಮಾಸ್ ಉಗ್ರರ ವಿರುದ್ಧ. ಹೀಗಾಗಿ ನಾಗರೀಕರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸೂಚನೆ ನೀಡಿತ್ತು. ಹಮಾಸ್ ಉಗ್ರರ ಪ್ರಮುಖ ಕಟ್ಟಡ, ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ. ಈ ದಾಳಿಯಲ್ಲಿ ಆರ್ಥಿಕ ಸಚಿವ ಕೂಡ ಹತ್ಯೆಯಾಗಿರುವುದಾಗಿ ಸೇನೆ ಹೇಳಿದೆ.
ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ 900ಕ್ಕೂ ಹೆಚ್ಚು ಇಸ್ರೇಲಿಗರು ಮೃತಪಟ್ಟಿದ್ದಾರೆ. ಈ ಪೈಕಿ 11 ಅಮೆರಿಕನ್ ಪ್ರಜೆಗಳು ಸೇರಿದ್ದಾರೆ. ಹಲವು ಅಮೆರಿಕನ್ ಪ್ರಜೆಗಳನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಇದೀಗ ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಯುದ್ಧ 4ನೇ ದಿನಕ್ಕೆ ಕಾಲಿಟ್ಟಿದೆ. ಇಸ್ರೇಲ್ ದಾಳಿ ತೀವ್ರಗೊಳ್ಳುತ್ತಿದ್ದಂತೆ ಒತ್ತೆಯಾಳುಗಳ ಹತ್ಯೆ ಬೆದರಿಕೆಯನ್ನು ಹಮಾಸ್ ಉಗ್ರರು ಹಾಕಿದ್ದಾರೆ.