Monday, December 4, 2023

Latest Posts

ಇಸ್ರೇಲ್ ಏರ್‌ಸ್ಟ್ರೈಕ್ ಗೆ ಗಾಜಾದ ಐತಿಹಾಸಿಕ ಮಸೀದಿ ಧ್ವಂಸ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಮಾಸ್ ಉಗ್ರರ ಅಟ್ಟಹಾಸಕ್ಕೆ ಪ್ರತಿ ದಾಳಿ ನಡೆಸುತ್ತಿರುವ ಇಸ್ರೇಲ್ ಏರ್‌ಸ್ಟ್ರೈಕ್ ಮೂಲಕ ಗಾಜಾ ನಗರವನ್ನೇ ಧ್ವಂಸಗೊಳಿಸುತ್ತಿದೆ. ಈ ವೇಳೆ ಗಾಜಾದಲ್ಲಿರುವ ಐತಿಹಾಸಿಕ ಅಲ್ ಅಮೀನ್ ಮೊಹಮ್ಮದ್ ಮಸೀದಿಯನ್ನೂ ಧ್ವಂಸಗೊಳಿಸಿದೆ.

ಶನಿವಾರ ಹಮಾಸ್ ಉಗ್ರರು ಅಲ್ ಅಕ್ಸ ಫ್ಲಂಡ್ ಆಪರೇಶನ್ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಇತ್ತ ಇಸ್ರೇಲ್ ಆಪರೇಶನ್ ಸ್ವಾರ್ಡ್ ಆಫ್ ಐರನ್ ದಾಳಿಯನ್ನು ಆರಂಭಿಸಿದೆ.

ಗಾಜಾ ಪಟ್ಟಿಯಲ್ಲಿನ ಹಮಾಸ್ ಉಗ್ರರ ತಾಣಗಳು, ಕಟ್ಟಡಗಳು, ಹಮಾಸ್ ಉಗ್ರರ ನಾಯಕರ ಮನೆ, ಮಸೀದಿಗಳು ಧ್ವಂಸಗೊಂಡಿದೆ. ಇಸ್ರೇಲ್ ದಾಳಿ ಕ್ಷಣ ಹಮಾಸ್ ಉಗ್ರರು ಐತಿಹಾಸಿಕ ಅಲ್ ಅಮೀನ್ ಮೊಹಮ್ಮದ್ ಮಸೀದಿಯಲ್ಲಿ ಅಡಗಿಕುಳಿತಿದ್ದಾರೆ. ಹೀಗಾಗಿ ಮಸೀದಿ ಮೇಲೆ ದಾಳಿನಡೆಸಿ ಧ್ವಂಸ ಮಾಡಲಾಗಿದೆ.

ಹಮಾಸ್ ಉಗ್ರರ ಇಂಟೆಲಿಜೆನ್ಸ್ ವಿಭಾಗದ ಮುಖ್ಯಸ್ಥ ಕಚೇರಿ ಮೇಲೂ ಇಸ್ರೇಲ್ ದಾಳಿ ನಡೆಸಿದೆ. ಹಲವು ಉಗ್ರರು ಈದಾಳಿಯಲ್ಲಿ ಮೃತಪಟ್ಟಿದ್ದಾರೆ. ಇಸ್ರೇಲ್ ವಿರುದ್ಧ ನಡೆಸಿದ ದಾಳಿಗೆ ತಕ್ಕ ಪ್ರತೀಕಾರ ತೀರಿಸುವ ಶಪಥ ಮಾಡಿರುವ ಇಸ್ರೇಲ್ ಗಾಜಾದ ಮೂಲೆ ಮೂಲೆಯಲ್ಲಿ ಸ್ಮಾರ್ಟ್‌ಬಾಂಬ್ ದಾಳಿ ನಡೆಸುತ್ತಿದೆ. ಗಾಜಾದಲ್ಲಿರುವ ಹಲವು ಮಸೀದಿಗಳು ಧ್ವಂಸಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!