ಬಾನಂಗಳದಲ್ಲಿ ಮತ್ತೆ ಹಾರಾಟ ನಡೆಸಿತು ‘ಡಕೋಟಾ’!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
 
ಭಾರತದ ಇತಿಹಾಸದಲ್ಲಿ ಮರೆಯಲಾದ ಹೆಸರು ಡಕೋಟಾ ಡಿಸಿ-3 ವಿಪಿ- 905 ವಿಮಾನ. ಇದಕ್ಕೆ ಕಾರಣ ದೇಶ ವಿಭಜನೆಗೊಂಡ ಬಳಿಕ ಕಾಶ್ಮೀರ ವಶಪಡಿಸಿಕೊಳ್ಳಲು ಪಾಕಿಸ್ತಾನಮುಂದಾಗಿತ್ತು. ಈ ವೇಳೆ ಕಾಶ್ಮೀರನ್ನು ಉಳಿಸಿಕೊಳ್ಳಲು ನೆರವಾಗಿದ್ದು ಡಕೋಟಾ ವಿಮಾನ.

1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲೂ ಇದೇ ಡಕೋಟಾ ಪ್ರಮುಖ ಪಾತ್ರ ನಿರ್ವಹಿಸಿತ್ತು. ಇದೀಗ ಇಂದು ಭಾರತ ಅತ್ಯಂತ ಹಳೆ ವಿಮಾನ ಮತ್ತೆ ಹಾರಾಟ ನಡೆಸಿದೆ. ಪ್ರಯಾಗ್‌ರಾಜ್‌ನಲ್ಲಿ ನಡೆದ ಭಾರತೀಯ ವಾಯುಸೇನೆಯ ಫ್ಲೈಫಾಸ್ಟ್ ವಾರ್ಷಿಕೋತ್ಸವದಲ್ಲಿ ಡಕೋಟಾ ಡಿಸಿ3 ವಿಪಿ 905 ಹಾರಾಟ ನಡೆಸಿದೆ.

ವಿಂಗ್ ಕಮಾಂಡರ್ ಡಿ. ಧಂಕರ್ ಸಾರಥ್ಯದಲ್ಲಿ ಡಕೋಟಾ ಹಾಗೂ ಸಿಬ್ಬಂದಿ ಪ್ರಯಾಗ್ ರಾಜ್‌ನ ಅಕಾಶದಲ್ಲಿ ಹಾರಾಟ ನಡೆಸಿದ್ದಾರೆ.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಈ ವಿಮಾವನ್ನು ಖರೀದಿಸಿ, ಮರುಸ್ಥಾಪಿಸಿ ಭಾರತೀಯ ವಾಯುಸೇನೆಗೆ ಉಡುಗೊರೆಯಾಗಿ ನೀಡಿದ್ದಾರೆ.

1947-48ರಲ್ಲಿ ಪಾಕಿಸ್ತಾನ ಜಮ್ಮ ಮತ್ತು ಕಾಶ್ಮೀರದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತ್ತು.ಈ ವೇಳೆ ಭಾರತೀಯ ಸೇನೆ ಯೋಧರನ್ನು ಕಾಶ್ಮೀರ ಆಯಕಟ್ಟಿನ ಜಾಗಕ್ಕೆ ಕರೆದೊಯ್ಯುವುದು ಸೇರಿದಂತೆ ಶಸ್ತ್ರಾಸ್ತ್ರ ಪೂರೈಕೆಯನ್ನು ಡಕೋಟಾ ಮಾಡಿದೆ. 1971ರಲ್ಲಿ ಪಾಕಿಸ್ತಾನದ ಕಪಿಮುಷ್ಠಿಯಿಂದ ಬಾಂಗ್ಲಾದೇಶವನ್ನು ವಿಮೋಚನೆಗೊಳಿಸುವ ಹೋರಾಟದಲ್ಲೂ ಇದೇ ಡಕೋಟಾ ಪ್ರಮುಖ ಪಾತ್ರ ನಿರ್ವಹಿಸಿತ್ತು.ಬಳಿಕ ಡಕೋಟಾ ಫ್ಲೀಟ್ ಸೇವೆಯಿಂದ ನಿವೃತ್ತಿಯಾಯಿತು. ಈ ವಿಮಾನವನ್ನು ಸ್ಕ್ರಾಪ್ ರೂಪದಲ್ಲಿ ಮಾರಾಟ ಮಾಡಲಾಗಿತ್ತು.

ಇದರ ಬಳಿಕ 2011ರಲ್ಲಿ ಐರ್ಲೆಂಡ್‌ನಲ್ಲಿ ಭಾರತದ ಈ ಯುದ್ಧ ವಿಮಾನವನ್ನು ಮಾರಾಟಕ್ಕೆ ಇಡಲಾಗಿತ್ತು. ಈ ಕುರಿತು ಮಾಹಿತಿ ಪಡೆದ ಸಚಿವ ರಾಜೀವ್ ಚಂದ್ರಶೇಖರ್ ಖರೀದಿಸಲು ಮುಂದಾದರು. ಭಾರತದ ಯುದ್ಧ ಇತಿಹಾಸದಲ್ಲಿ ಪ್ರಮುಖ ಪಾತ್ರನಿರ್ವಹಿಸಿ ದೇಶದ ಗರಿಮೆಯನ್ನು ಎತ್ತಿಹಿಡಿದ ವಿಮಾನ ಅನ್ನೋದ ಪ್ರಮುಖ ಕಾರಣಾಗಿತ್ತು. ಇದರ ಜೊತೆಗೆ ಈ ಡಕೋಟಾ ವಿಮಾನಕ್ಕೆ ರಾಜೀವ್ ಚಂದ್ರಶೇಖರ್ ಅವರ ತಂದೆ ಏರ್ ಕಮಾಂಡರ್ ಎಂಕೆ ಚಂದ್ರಶೇಖರ್ ಪೈಲೆಟ್ ಆಗಿದ್ದರು.

ಡಕೋಟಾ ವಿಮಾವನ್ನು ಸ್ವಂತ ಖರ್ಚಿನಲ್ಲಿ ಖರೀದಿಸಿ ಬಳಿಕ ಸಂಪೂರ್ಣವಾಗಿ ಮರುಸ್ಥಾಪಿಸಿ ವಾಯುಸೇನೆಗೆ ಉಡುಗೊರೆಯಾಗಿ ನೀಡುವ ರಾಜೀವ್ ಚಂದ್ರಶೇಖರ್ ಪ್ರಸ್ತಾವನೆಯನ್ನು ಅಂದಿನ ಕಾಂಗ್ರೆಸ್ ಸರ್ಕಾರದ ರಕ್ಷಣಾ ಸಚಿವ ಎಕೆ ಆ್ಯಂಟಿನಿ ನಿರಾಕರಿಸಿದರು. ಬಳಿಕ ಬಿಜೆಪಿ ಸರ್ಕಾರದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪ್ರಸ್ತಾವನೆ ಅಂಗೀಕರಿಸಿದರು.2018ರಲ್ಲಿ ಈ ವಿಮಾನವನ್ನು ಸಂಪೂರ್ಣವಾಗಿ ನವೀಕರಿಸಲಾಯಿತು. ಬಳಿಕ ಮೇ.4, 2018ರಂದು ಹಿಂದು ಧರ್ಮದ ವಿಷ್ಣುವಿನ 6ನೇ ಅವತಾರ ಪರಶುರಾಮ ಅನ್ನೋ ಹೆಸರಿನಿಂದ ನವೀಕರಣಗೊಂಡಿತು. ವಿಮಾನದ ಬಾಲದಲ್ಲಿ ವಿಪಿ 905 ನಂಬರ್ ನಮೂದಿಸಲಾಗಿದೆ. ಹಿಂದಾನ್‌ನಲ್ಲಿರುವ ವಾಯುಪಡೆ ನಿಲ್ದಾಣ ಐಎಫ್ ವಿಂಟೇಜ್ ಸ್ಕ್ವಾಡ್ರನ್‌ನಲ್ಲಿ ಅಧಿಕೃತವಾಗಿ ಸ್ವಾಗತ ನೀಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!