ಅವತಾರ್​ 2 ಬಿಡುಗಡೆಗೆ ಸಜ್ಜು: ಟಿಕೆಟ್​ ಬುಕಿಂಗ್​ ಶುರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಲಿವುಡ್‌ನ ‘ಅವತಾರ್​ 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು,ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆಯುವುದು ಖಚಿತ ಎಂದು ಸಿನಿ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಭಾರತದಲ್ಲಿ ಎಲ್ಲೆಡೆ `ಅವತಾರ್ 2′ ಟಿಕೆಟ್ಸ್ ದುಬಾರಿ ಬೆಲೆಗೆ ಸೆಲ್ ಆಗುತ್ತಿದೆ. ಡಿಸೆಂಬರ್​ 16ರಂದು ಪ್ರಪಂಚದ ಸಾವಿರಾರು ಚಿತ್ರಮಂದಿರಗಳಲ್ಲಿ ಈ ಚಿತ್ರ ಅಬ್ಬರಿಸಲಿದೆ.
ಈಗಾಗಲೇ 24 ದಿನಗಳ ಮುನ್ನವೇ ‘ಅವತಾರ್​ 2’ ಚಿತ್ರದ ಅಡ್ವಾನ್ಸ್​ ಟಿಕೆಟ್​ ಬುಕಿಂಗ್ ಓಪನ್​ ಆಗಿದೆ. ಬೆಂಗಳೂರು, ಮುಂಬೈ ಸೇರಿದಂತೆ ಭಾರತದ ಹಲವು ನಗರಗಳಲ್ಲಿ ವೇಗವಾಗಿ ಎಲ್ಲ ಟಿಕೆಟ್​ಗಳು ಸೋಲ್ಡ್​ ಔಟ್​ ಆಗುತ್ತಿವೆ.

ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್​ ಅವರು ‘ಅವತಾರ್​ 2’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. 13 ವರ್ಷಗಳ ಹಿಂದೆ ‘ಅವತಾರ್​’ ಚಿತ್ರ ತೆರೆಕಂಡು ದಾಖಲೆ ಬರೆದಿತ್ತು. ಬಳಿಕ ಆ ಚಿತ್ರಕ್ಕೆ ಸೀಕ್ವೆಲ್​ ಅನೌನ್ಸ್​ ಆಯಿತು. ಈಗ ‘ಅವತಾರ್​ 2’ ಚಿತ್ರವನ್ನು ನೋಡುವ ಸಮಯ ಹತ್ತಿರವಾಗುತ್ತಿದೆ.

ಪ್ರಪಂಚದ ಹಲವು ಭಾಷೆಗಳಿಗೆ ಡಬ್ ಆಗಿ ‘ಅವತಾರ್​ 2’ ತೆರೆಕಾಣುತ್ತಿದೆ. ಭಾರತದಲ್ಲಿ ಹಿಂದಿ, ಇಂಗ್ಲಿಷ್​, ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಈ ಚಿತ್ರ ರಿಲೀಸ್​ ಆಗಲಿದೆ.

3ಡಿ, ಇಮ್ಯಾಕ್ಸ್​ 3ಡಿ, 4ಡಿಎಕ್ಸ್​ ಮುಂತಾದ ವರ್ಷನ್​ನಗಳಲ್ಲಿ ‘ಅವತಾರ್​ 2’ ಪ್ರದರ್ಶನ ಆಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಮತ್ತು ಟ್ರೇಲರ್​ ಗಮನ ಸೆಳೆದಿದೆ. ಫೈನಲ್​ ಟ್ರೇಲರ್​ ಕೂಡ ಇತ್ತೀಚೆಗೆ ಬಿಡುಗಡೆ ಆಗಿದ್ದು, ಸಿನಿಮಾ ಮೇಲಿನ ಕೌತುಕ ಹೆಚ್ಚಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!