ಜಾಕೀರ್​ ನಾಯ್ಕ್​​ನನ್ನು ನಾವು ಕರೆದಿಲ್ಲ, ಇದು ಅನ್ಯದೇಶಗಳ ಕುತಂತ್ರ: ಭಾರತಕ್ಕೆ ಸ್ಪಷ್ಟನೆ ಕೊಟ್ಟ ಕತಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕತಾರ್​​ನಲ್ಲಿ ನವೆಂಬರ್​​ 20ರಂದು ನಡೆದ ಫುಟ್​ಬಾಲ್​ ವಿಶ್ವಕಪ್​ ಉದ್ಘಾಟನಾ ಸಮಾರಂಭದಲ್ಲಿ ವಿವಾದಿತ ಮುಸ್ಲಿಂ ಧರ್ಮಗುರು ಜಾಕೀರ್​ ನಾಯ್ಕ್​ ಪಾಲ್ಗೊಂಡಿದ್ದ ವಿಡಿಯೊವೊಂ ಏಳೇಳ್ದೆ ವೈರಲ್ ಆಗಿದ್ದು, ಇದರಿಂದ ಭಾರತದಲ್ಲಿ ಹಲವು ಟೀಕೆಗಳು ವ್ಯಕ್ತವಾಗಿತ್ತು.

ಭಾರತದಲ್ಲಿ ‘ಫುಟ್​ಬಾಲ್ ವಿಶ್ವಕಪ್​ ಪಂದ್ಯಾವಳಿಯನ್ನು ಬಹಿಷ್ಕರಿಸಿ’ ಎಂಬ ಅಭಿಯಾನವೇ ಸೋಷಿಯಲ್​ ಮೀಡಿಯಾದಲ್ಲಿ ನಡೆಯುತ್ತಿತ್ತು. ​

ಈ ಸುದ್ದಿ ತಿಳಿಯುತ್ತಿದ್ದಂತೆ ಕತಾರ್​ ಆಡಳಿತ ಸ್ಪಷ್ಟನೆ ನೀಡಿದೆ. ‘ಫಿಫಾ ವರ್ಲ್ಡ್​ಕಪ್​ ಉದ್ಘಾಟನಾ ಸಮಾರಂಭಕ್ಕೆ ನಾವು ಜಾಕೀರ್​ ನಾಯ್ಕ್​​ನನ್ನು ಆಹ್ವಾನಿಸಿರಲಿಲ್ಲ’ ಎಂದು ಭಾರತಕ್ಕೆ ತಿಳಿಸಿದೆ. ಅಷ್ಟೇ ಅಲ್ಲ, ‘ಕತಾರ್​-ಭಾರತದ ದ್ವಿಪಕ್ಷೀಯ ಸಂಬಂಧವನ್ನು ಹಾಳುಗೆಡವಲು ಯಾವುದೋ ಅನ್ಯದೇಶಗಳು ಮಾಡಿದ ಕುತಂತ್ರ ಇದು. ಬೇಕೆಂತಲೇ ತಪ್ಪು ಮಾಹಿತಿಗಳನ್ನು ಹಬ್ಬಿಸಲಾಗುತ್ತಿದೆ’ ಎಂದೂ ಹೇಳಿದೆ.

ಕತಾರ್​ ಈ ಬಗ್ಗೆ ಭಾರತಕ್ಕೆ ರಾಜತಾಂತ್ರಿಕ ಸಂದೇಶವನ್ನು ನೀಡಿದೆ. ಜಾಕೀರ್​ ನಾಯ್ಕ್​ ಬಹುಶಃ ಖಾಸಗಿಯಾಗಿ ಫಿಫಾ ವರ್ಲ್ಡ್​ಕಪ್​​ಗೆ ಭೇಟಿ ಕೊಟ್ಟಿದ್ದಿರಬಹುದು’ ಎಂದೂ ಹೇಳಿಕೊಂಡಿದೆ.

2016ರಿಂದಲೂ ವಿವಿಧ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ಜಾಕಿರ್​​ ನಾಯ್ಕ್​​ ಮಲೇಷ್ಯಾಕ್ಕೆ ಹೋಗಿ ನೆಲೆಸಿದ್ದಾನೆ. ಅಲ್ಲಿದ್ದರೂ ಆತ ತನ್ನ ಪ್ರವಚನ, ಭಾಷಣವನ್ನು ವಿಡಿಯೊ ಮಾಡಿ, ಭಾರತ ಮುಸ್ಲಿಮರಿಗೂ ಕಳಿಸುತ್ತಾನೆ ಎಂಬ ಮಾಹಿತಿ ಇದೆ.

ಈತ ಸ್ಥಾಪಿಸಿದ ಇಸ್ಲಾಮಿಕ್​ ರಿಸರ್ಚ್​ ಫೌಂಡೇಶನ್​ (ಐಆರ್​ಎಫ್​) ಒಂದು ಕಾನೂನು ಬಾಹಿರ ಸಂಘಟನೆ ಎಂದು ಇದೇ ವರ್ಷ ಮಾರ್ಚ್​​ನಲ್ಲಿ ಕೇಂದ್ರ ಗೃಹ ಇಲಾಖೆ ಘೋಷಿಸಿತ್ತು. ಕಾನೂನುಬಾಹಿರ ಚಟುವಟಿಕೆ ನಿಯಂತ್ರ ಕಾಯ್ದೆ (UAPA)ಯಡಿ ಪ್ರಕರಣವನ್ನೂ ದಾಖಲಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!