ಕ್ರೀಡಾ ಬದುಕಿಗೆ ಗುಡ್‌ಬೈ ಹೇಳಿದ ಓಟಗಾರ ಜಸ್ಟಿನ್ ಗ್ಯಾಟ್ಲಿನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಮಿಂಚಿನ ವೇಗದ ಓಟಗಾರ ಜಸ್ಟಿನ್ ಗ್ಯಾಟ್ಲಿನ್ ಇದೀಗ ತಮ್ಮ ಕ್ರೀಡಾ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.
ಡೋಪಿಂಗ್ ವಿವಾದಿಂದ ಬೇಸತ್ತಿದ್ದ ಓಟಗಾರ ಜಸ್ಟಿನ್ ಕ್ರೀಡಾ ಬದುಕಿಗೆ ಗುಡ್ ಬೈ ಹೇಳಿದ್ದಾರೆ. 2004 ರಲ್ಲಿ ಅಥೆನ್ಸ್ ಒಲಿಂಪಿಕ್ಸ್ ಕ್ರೀಡಾಕೂಟದ 100  ಮೀಟರ್ ಓಟದ ಸ್ಪರ್ಧೆಯಲ್ಲಿ ಜಸ್ಟಿನ್ ಚಿನ್ನ ಗೆದ್ದಿದ್ದರು.

2019 ರಲ್ಲಿ ದೋಹಾ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಜಸ್ಟಿನ್ ಚಿನ್ನದ ಪದಕ ಕೊರಳಿಗಿಳಿಸಿದ್ದರು.
ಸಾಮಾಜಿಕ ಜಾಲತಾಣದಲ್ಲ ತಮ್ಮ ನಿವೃತ್ತಿ ಘೋಷಿಸಿದ್ದು, ಡಿಯರ್ ಟ್ರ್ಯಾಕ್, ನಾನು ನಿನ್ನಿಂದ ತುಂಬಾ ಕಲಿತಿದ್ದೇನೆ. ನಿನ್ನನ್ನು ಪ್ರೀತಿಸಿದ್ದೇನೆ. ಖುಷಿ, ಕಣ್ಣೀರು ಎರಡನ್ನೂ ಇಲ್ಲಿ ಕಂಡಿದ್ದೇನೆ ಯಾವ ಪಾಠವನ್ನೂ ನಾನು ಮರೆಯುವುದಿಲ್ಲ ಎಂದು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!