ರಾಜಸ್ಥಾನ ಬಿಕ್ಕಟ್ಟಿನ ನಡುವೆಯೇ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲಿದ್ದಾರೆ ಗೆಹ್ಲೋಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಇಂದು ದೆಹಲಿಯಲ್ಲಿ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಅವರು ತಮ್ಮ ಹಿಂದಿನ ಯೋಜನೆಯಂತೆ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ ಅಧ್ಯಕ್ಷೀಯ ಸ್ಥಾನಕ್ಕೆ ನಾಮ ನಿರ್ದೇಶನ ನೀಡಲಿದ್ದಾರೆಯೇ ಎಂಬ ಊಹಾಪೋಹಗಳ ನಡುವೆ ಈ ಬೆಳವಣಿಗೆ ನಡೆಯಲಿದೆ.

ಗೆಹ್ಲೋಟ್‌ ಅವರನ್ನು ಬೆಂಬಲಿಸುವ ಸುಮಾರು 90 ಶಾಸಕರು ರಾಜಿನಾಮೆ ಸಲ್ಲಿಸಿದ ನಂತರ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದುಅಶೋಕ್‌ ಗೆಹ್ಲೋಟ್‌ ಅವರು ಅವರು ಅಧ್ಯಕ್ಷ ಸ್ಥಾನ ಗೆದ್ದರೆ ಮುಂದಿನ ಮುಖ್ಯಮಂತ್ರಿಯಾಗಿ ಸಚಿನ್ ಪೈಲಟ್ ಆಯ್ಕೆಯಾಗಲಿದ್ದಾರೆ. ಇದನ್ನು ವಿರೋಧಿಸಿ ಕಾಂಗ್ರೆಸ್‌ ನಾಯಕರ ವಿರುದ್ಧ ಶಾಸಕರು ರಾಜೀನಾಮೆ ನೀಡಿದ್ದಾರೆ.

ಹೊಸ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಿಸಿದ ನಂತರ ರಾಜಸ್ಥಾನದಲ್ಲಿ ಸಂಭವನೀಯ ನಾಯಕತ್ವ ಬದಲಾವಣೆಯ ಕುರಿತು ಚರ್ಚೆಗಳು ನಡೆಯಬೇಕು ಎಂದು ಗೆಹ್ಲೋಟ್ ಶಿಬಿರದಲ್ಲಿರುವ ಶಾಸಕರು ಪಕ್ಷದ ಹೈಕಮಾಂಡ್‌ಗೆ ತಿಳಿಸಿದ್ದಾರೆ. ಅಲ್ಲದೇ ಅಶೋಕ್ ಗೆಹ್ಲೋಟ್ ಅವರ ಆಯ್ಕೆಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದೂ ಅವರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಇದು ಕಾಂಗ್ರೆಸ್ ನಾಯಕತ್ವ ಮತ್ತು ಗೆಹ್ಲೋಟ್ ನಿಷ್ಠಾವಂತರ ನಡುವಿನ ಬಿಕ್ಕಟ್ಟಿಗೆ ಕಾರಣವಾಯಿತು, ಪಕ್ಷದ ಹೈಕಮಾಂಡ್ ಅದರ ಪಕ್ಷದ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಅವರಿಂದ ವರದಿಯನ್ನು ಕೋರಿತು. ವೀಕ್ಷಕರು ಸೋನಿಯಾ ಗಾಂಧಿಗೆ ನೀಡಿದ ತಮ್ಮ ವರದಿಯಲ್ಲಿ ರಾಜ್ಯದ ಬಿಕ್ಕಟ್ಟಿಗೆ ಗೆಹ್ಲೋಟ್ ಹೊಣೆಗಾರರಲ್ಲ ಎಂದು ಕ್ಲೀನ್‌ ಚೀಟ್‌ ನೀಡಿದ್ದಾರೆ. ಆದರೆ ಸಮಾನಾಂತರ ಸಭೆ ಕರೆದ ಪ್ರಮುಖ ನಾಯಕರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ.

ಶಾಂತಿ ಧರಿವಾಲ್, ಮಹೇಶ್ ಜೋಶಿ ಮತ್ತು ಶಾಸಕ ಧರ್ಮೇಂದ್ರ ರಾಥೋಡ್ ಸೇರಿದಂತೆ ಗೆಹ್ಲೋಟ್ ಕ್ಯಾಂಪ್‌ನ ಹಲವಾರು ಕ್ಯಾಬಿನೆಟ್ ಮಂತ್ರಿಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯನ್ನು ಬುಡಮೇಲು ಮಾಡುವ ಉದ್ದೇಶದಿಂದ ಸಮಾನಾಂತರ ಸಭೆಯನ್ನು ಆಯೋಜಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!