ಡಿಜಿಟಲೀಕರಣವಾಗಲಿದೆ ಜಗನ್ನಾಥ ದೇವರಿಗೆ ಸೇರಿದ ಭೂಮಿ – ಏಳು ರಾಜ್ಯಗಳಲ್ಲಿ ಹರಡಿದೆ 60,000 ಎಕರೆ ಸ್ವತ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಳು ರಾಜ್ಯಗಳಲ್ಲಿ ಭಗವಾನ್ ಜಗನ್ನಾಥ ದೇವಾಲಯದ ಹೆಸರಿನಲ್ಲಿ 60,000 ಎಕರೆಗೂ ಹೆಚ್ಚು ಭೂಮಿಯಿದ್ದು, ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು.

ಒಡಿಶಾ ಸರ್ಕಾರ ಡಿಜಿಟಲೀಕರಣಕ್ಕೆ ಅನುಮೋದನೆ ನೀಡಿದ್ದು, ಭಗವಾನ್ ಜಗನ್ನಾಥನ ಹೆಸರಿನಲ್ಲಿ ಇರುವ 60 ಸಾವಿರ ಎಕರೆ ಜಮೀನಿನ ದಾಖಲೆಗಳನ್ನು ಶೀಘ್ರದಲ್ಲೇ ಡಿಜಿಟಲೀಕರಣ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಗನ್ನಾಥ ಬಿಜೆ ಹೆಸರಿನಲ್ಲಿ ಒಡಿಶಾದಲ್ಲಿ 60,426 ಎಕರೆ ಮತ್ತು ಇತರ ಆರು ರಾಜ್ಯಗಳಲ್ಲಿ 395.252 ಎಕರೆ ಭೂಮಿ ಇದೆ. ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ಸಭೆ ನಂತರ ಅಧಿಕಾರಿ ವಿ.ವಿ. ಯಾದವ್ ಡಿಜಿಟಲೀಕರಣದ ಮಾಹಿತಿ ನೀಡಿದ್ದಾರೆ. ಒಡಿಶಾದ ನಂತರ ಪಶ್ವಿಮ ಬಂಗಾಳದಲ್ಲಿ 322.930 ಎಕರೆ, ಮಹಾರಾಷ್ಟ್ರದಲ್ಲಿ 28.21 ಎಕರೆ, ಮಧ್ಯಪ್ರದೇಶದಲ್ಲಿ 25.11 ಎಕರೆ ಆಂಧ್ರಪ್ರದೇಶದಲ್ಲಿ 17.06 ಎಕರೆ, ಛತ್ತೀಸ್‌ಗಢದಲ್ಲಿ 1.7 ಎಕರೆ ಮತ್ತು ಬಿಹಾರದಲ್ಲಿ 0.27 ಎಕರೆ ಭೂಮಿ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!