Friday, March 24, 2023

Latest Posts

ನಾಗರಿಕರ ಮೇಲೆ ದುಷ್ಕರ್ಮಿಗಳ ಅಟ್ಯಾಕ್: ಏಳು ಜನರಿಗೆ ಗುಂಡೇಟು, ಹಲವರು ರಕ್ತ-ಸಿಕ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಉತ್ತರ ಜರ್ಮನಿಯ ನಗರ ಹ್ಯಾಂಬರ್ಗ್‌ ರಕ್ತ-ಸಿಕ್ತವಾಗಿದೆ. ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಏಳು ಮಂದಿ ನಾಗರಿಕರು ಪ್ರಾಣ ತೆತ್ತಿದ್ದು, ಹಲವರು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಅಲ್ಸ್ಟರ್‌ಡಾರ್ಫ್ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹ್ಯಾಂಬರ್ಗ್ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಡೀಲ್‌ಬೋ ಬೀದಿಯಲ್ಲಿರುವ ಜೆಹೋವಾಸ್ ವಿಟ್ನೆಸ್ ಸೆಂಟರ್‌ನಲ್ಲಿ ಶೂಟ್‌ಔಟ್‌ ನಡೆದಿದೆ.
ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ, ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲಿ ಪೊಲೀಸರು ಹೆಚ್ಚಿನ ಭದ್ರತೆ ನಿಯೋಜಿಸಿದ್ದಾರೆ.

ನಡೆಯುತ್ತಿರುವ ಕಾರ್ಯಾಚರಣೆಯ ಮಧ್ಯೆ ಸಮೀಪದಲ್ಲಿ ವಾಸಿಸುವ ನಿವಾಸಿಗಳು ತಮ್ಮ ಮನೆಗಳನ್ನು ತೊರೆಯುವಂತೆ ಎಚ್ಚರಿಸಿದ್ದಾರೆ.
ಇಲ್ಲಿಯವರೆಗೆ, ಅಪರಾಧದ ಉದ್ದೇಶದ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!