ರೈಲು-ಬಸ್ ನಡುವೆ ಭೀಕರ ಅಪಘಾತ: 6ಮಂದಿ ಸಾವು, 84ಜನರ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಯಾಣಿಕರ ಬಸ್‌ಗೆ ರೈಲು ಡಿಕ್ಕಿ ಹೊಡೆದು ಆರು ಜನರು ಸಾವನ್ನಪ್ಪಿದ್ದು, ಹತ್ತಾರು ಮಂದಿ ಗಾಯಗೊಂಡಿರುವ ಘಟನೆ ನೈಜೀರಿಯಾದ ಲಾಗೋಸ್‌ನಲ್ಲಿ ನಡೆದಿದೆ. ಲಾಗೋಸ್‌ನ ಇಕೆಜಾ ಪ್ರದೇಶದಲ್ಲಿ ಬಸ್ ಸರ್ಕಾರಿ ಸಿಬ್ಬಂದಿಯನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದಾಗ ಇಂಟ್ರಾ-ಸಿಟಿ ರೈಲಿ ಡಿಕ್ಕಿ ಹೊಡೆದಿದೆ ಎಂದು ನೈಜೀರಿಯಾದ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಇಬ್ರಾಹಿಂ ಫಾರಿನ್‌ಲೋಯ್ ಹೇಳಿದ್ದಾರೆ.

ಇಲ್ಲಿಯವರೆಗೆ, 84 ಜನರನ್ನು ಜೀವಂತವಾಗಿ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಗೊಂಡವರೆಲ್ಲರೂ ಬಸ್ಸಿನಲ್ಲಿದ್ದವರು, ರೈಲಿನಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಘಟನೆಗೆ ಪ್ರಮುಖ ಕಾರಣವೆಂದರೆ ಬಸ್ ಚಾಲಕನ ಅಜಾಗರೂಕ ಚಾಲನೆ ಎಂದು ಗೊತ್ತಾಗಿದೆ. ರೈಲು ಟ್ರಾಫಿಕ್ ಸಿಗ್ನಲ್ ನೋಡದೆ ಬಸ್‌ ಚಲಾಯಿಸಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.

ನೈಜೀರಿಯಾದ ನಗರಗಳಲ್ಲಿ ರೈಲು ಮತ್ತು ಟ್ರಕ್ ಅಪಘಾತಗಳು ಸಾಮಾನ್ಯವಾಗಿವೆ, ಅಲ್ಲಿ ಸಂಚಾರ ನಿಯಮಗಳು ಸರಿಯಾಗಿ ಪಾಲನೆಯಾಗುವುದಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!