ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟ: ಜಪಾನ್, ಅಮೆರಿಕಗೆ ಸುನಾಮಿ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೆಸಿಫಿಕ್ ದ್ವೀಪ ಟಾಂಗಾದಲ್ಲಿ ಸಮುದ್ರದೊಳಗೆ ಜ್ವಾಲಾಮುಖಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಅಮೆರಿಕ, ನ್ಯೂಜಿಲೆಂಡ್, ಜಪಾನ್ ದೇಶಗಳಿಗೆ ಸುನಾಮಿಯ ಎಚ್ಚರಿಕೆ ನೀಡಿದೆ.
ಜ್ವಾಲಾಮುಖಿ ಸ್ಫಾಟಗೊಂಡು ಸುಮಾರು 20 ಕಿ.ಮೀ.ವರೆಗೆ ಹೊಗೆ ಸಹಿತ ಅನಿಲ ಚಿಮ್ಮಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಟಾಂಗಾ ಪ್ರದೇಶದ ಸುತ್ತಮುತ್ತಲು ಗುಡುಗು ಸಹಿತ ಮಳೆಯಾಗುತ್ತಿದ್ದು, ಸುನಾಮಿಯ ಎಚ್ಚರಿಕೆ ನೀಡಲಾಗಿದೆ. ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ವರದಿ ತಿಳಿಸಿದೆ. ಹಲವು ಗ್ರಾಮಗಳು ಅಪಾಯದ ಮಟ್ಟದಲ್ಲಿದ್ದು, ಸ್ಥಳೀಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!