January18, 2026
Sunday, January 18, 2026
spot_img

ದೇಶಾದ್ಯಂತ ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗಿ..17 ವರ್ಷ ಜೈಲು ಶಿಕ್ಷೆ ಘೋಷಣೆ ಬೆನ್ನಲ್ಲೇ ಇಮ್ರಾನ್ ಖಾನ್ ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

17 ವರ್ಷಗಳ ಜೈಲು ಶಿಕ್ಷೆಗೊಳಗಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿಭಟನೆಗೆ ಸಜ್ಜಾಗುವಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ಸ್ಥಳೀಯ ನ್ಯಾಯಾಲಯವೊಂದು ಶನಿವಾರ ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

73 ವರ್ಷದ ಇಮ್ರಾನ್ ಖಾನ್ ಆಗಸ್ಟ್ 2023 ರಿಂದ ಜೈಲಿನಲ್ಲಿದ್ದಾರೆ. ತೋಷಖಾನಾ 2 ಪ್ರಕರಣದಲ್ಲಿ 2021 ರಲ್ಲಿ ಸೌದಿ ಸರ್ಕಾರದಿಂದ ದಂಪತಿಗಳು ಪಡೆದ ರಾಜ್ಯ ಉಡುಗೊರೆಗಳಲ್ಲಿ ವಂಚನೆ ಸೇರಿದೆ.

ಮಧ್ಯರಾತ್ರಿಯಲ್ಲಿ ಇಮ್ರಾನ್ ಖಾನ್ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಪ್ರಕಾರ, “ಮಿಲಿಟರಿ-ಶೈಲಿಯ ವಿಚಾರಣೆಯ ನಿರ್ಧಾರ” ದ ನಂತರ ಅಡಿಯಾಲಾ ಜೈಲಿನಲ್ಲಿ ತಮ್ಮ ವಕೀಲರೊಂದಿಗಿನ ಸಂಭಾಷಣೆ ವೇಳೆ, ದೇಶಾದ್ಯಂತ ಪ್ರತಿಭಟನೆಗೆ ಸಜ್ಜಾಗುವಂತೆ ತನ್ನ ಬೆಂಬಲಿಗರಿಗೆ ಹೇಳಿರುವುದಾಗಿ ವರದಿಯಾಗಿದೆ. ಆದರೆ, ಜೈಲಿನಲ್ಲಿ ಖಾನ್ ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ ಅವಕಾಶವಿಲ್ಲದ ಕಾರಣ ಅವರ ವೈಯಕ್ತಿಕ ಖಾತೆಯಲ್ಲಿ ಸಂಭಾಷಣೆಯನ್ನು ಯಾರು ಪೋಸ್ಟ್ ಮಾಡಿದ್ದಾರೆ ಎಂಬುದು ತಿಳಿದಿಲ್ಲ.

ಇತ್ತೀಚಿನ ಶಿಕ್ಷೆಯು ಆಶ್ಚರ್ಯಕರವಾಗಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದು, ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್‌ಗೆ ತೆರಳಲು ತಮ್ಮ ಕಾನೂನು ತಂಡವನ್ನು ಕೇಳಿಕೊಂಡಿದ್ದಾರೆ.

ಕಳೆದ ಮೂರು ವರ್ಷಗಳ ಆಧಾರರಹಿತ ನಿರ್ಧಾರಗಳು ಮತ್ತು ಶಿಕ್ಷೆಗಳಂತೆ, ತೋಷಖಾನಾ-II ನಿರ್ಧಾರವೂ ನನಗೆ ಹೊಸದೇನಲ್ಲ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಮತ್ತು ಕಾನೂನು ಅವಶ್ಯಕತೆಗಳನ್ನು ಪೂರೈಸದೆ ನ್ಯಾಯಾಧೀಶರು ತರಾತುರಿಯಲ್ಲಿ ಈ ನಿರ್ಧಾರವನ್ನು ನೀಡಿದ್ದಾರೆ. ಕಾನೂನಿನ ಪರಮಾಧಿಕಾರ ಮತ್ತು ಸಂವಿಧಾನವನ್ನು ಮರುಸ್ಥಾಪಿಸುವ ಹೋರಾಟಕ್ಕೆ ನ್ಯಾಯಾಧೀಶರು ಮತ್ತು ವಕೀಲರು ಮುಂದೆ ಬರುವುದು ಅಗತ್ಯವಾಗಿದೆ. ನ್ಯಾಯ ವ್ಯವಸ್ಥೆ ಮಾತ್ರ ಜನರನ್ನು ರಕ್ಷಿಸುತ್ತದೆ. ಇಲ್ಲದೆ ಹೋದರೆ ಆರ್ಥಿಕ ಪ್ರಗತಿಯಾಗಲೀ, ನೈತಿಕ ಬೆಳವಣಿಗೆಯಾಗಲೀ ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

Must Read

error: Content is protected !!