Thursday, October 6, 2022

Latest Posts

ಒತ್ತಡಕ್ಕೆ ಬರುವ ತಲೆನೋವು ದೂರ ಮಾಡೋಕೆ ಇಲ್ಲಿದೆ ಮನೆಮದ್ದು..

ಕೆಲಸದ ಒತ್ತಡ ಅಥವಾ ಮನೆಯಲ್ಲಿ ಸಮಸ್ಯೆ ಹೀಗೆ ನೂರಾರು ಕಾರಣಗಳಿಂದ ತಲೆನೋವು ಬರಬಹುದು, ಕೆಲವೊಮ್ಮೆ ಇದು ನಮ್ಮ ಶತ್ರು ಇರಬಹುದು ಎನಿಸುವಷ್ಟು ನೋವು ನೀಡುತ್ತದೆ. ತಲೆನೋವು ಸಾಮಾನ್ಯ ಅದಕ್ಕೆ ಮನೆಯಲ್ಲಿಯೇ ಬೇಕಾದಷ್ಟು ಮದ್ದುಗಳಿವೆ. ಇವುಗಳನ್ನು ಟ್ರೈ ಮಾಡಿ..

  • ಹಣೆಯ ಮೇಲೆ ಐಸ್ ಪ್ಯಾಕ್ ಇಟ್ಟು ಕೆಲ ಕಾಲ ರಿಲ್ಯಾಕ್ಸ್ ಮಾಡಿ.
  • ಕೆಲವರಿಗೆ ಐಸ್ ಪ್ಯಾಕ್ ಬದಲು ಹೀಟ್ ಪ್ಯಾಡ್ ಕೆಲಸ ಮಾಡುತ್ತದೆ. ಇದು ತಲೆಯ ಭಾಗದ ಪ್ರೆಶರ್ ಕಡಿಮೆ ಮಾಡುತ್ತದೆ.
  • ಸ್ವಲ್ಪ ಜನರಿಗೆ ಹೆಚ್ಚು ಬೆಳಕಿದ್ದರೆ, ತಲೆ ನೋವು ಬರುತ್ತದೆ. ಡಿಮ್ ಲೈಟ್ ಬಳಸಿ.
  • ಅತೀ ತಲೆನೋವು ಇದ್ದಾಗ ಜಗಿಯುವ ಪ್ರಕ್ರಿಯೆ ಬೇಡ, ದ್ರವ್ಯ ಆಹಾರ ಬಳಸಿ.
  • ಕೆಫೀನ್ ಸೇವನೆಯಿಂದ ತಲೆನೋವು ಕಡಿಮೆ ಆಗುತ್ತದೆ.
  • ಇನ್ನು ಯೋಗ ಧ್ಯಾನವೂ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಇದರಿಂದಲೂ ತಲೆನೋವು ಕಡಿಮೆಯಾಗುತ್ತದೆ.
  • ತುಳಸಿ ಚಹಾ, ಶುಂಠಿ ಕಾಫಿ, ಕ್ಯಾಮೊಮ್ಮಿಲ್ ಟೀ, ಲ್ಯಾವೆಂಡರ್ ಚಹಾ ಮತ್ತು ಗ್ರೀನ್ ಟೀ ಕೂಡ ತಲೆನೋವು ನಿವಾರಣೆಗೆ ಸಹಕಾರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!