ಲಸಿಕೆ ಹಾಕಿಸಿಕೊಳ್ಳಿ: ಜೋಕೋವಿಕ್‌ಗೆ ಸ್ಪೇನ್ ಸಲಹೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟೆನಿಸಿಗ ಜೋಕೋವಿಕ್ ಕೋವಿಡ್ ಲಸಿಕೆ ಹಾಕಿಸಿಕೊಂಡು ಇತರರಿಗೆ ಮಾದರಿಯಾಗುವಂತೆ ಸ್ಪೇನ್ ಸರಕಾರವು ಮನವಿ ಮಾಡಿದೆ.
ಸ್ಪೇನ್‌ನಲ್ಲಿ ನಡೆಯಲಿರುವ ಮ್ಯಾಡ್ರಿಡ್ ಓಪನ್ ಟೆನಿಸಿನಲ್ಲಿ ಜೋಕೋವಿಕ್ ಆಡುವ ಕುರಿತು ಸಂದೇಹಗಳು ಮೂಡಿರುವ ಹಿನ್ನೆಲೆಯಲ್ಲಿ ಸರಕಾರವು ಇದನ್ನು ತಿಳಿಸಿದೆ.
ಸ್ಪೇನ್‌ನಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯವಲ್ಲದಿದ್ದರೂ ಅಲ್ಲಿ ಲಸಿಕೆ ಹಾಕಿಸಿಕೊಂಡವರ ಸಂಖ್ಯೆ ಅಧಿಕವಾಗಿದೆ.
ಜೋಕೋವಿಕ್ ಅವರು ಲಸಿಕೆ ಹಾಕಿಸಿಕೊಂಡು ಇತರರಿಗೆ ಮಾದರಿಯಾಗಬೇಕು. ನಮ್ಮ ದೇಶದ ಕ್ರೀಡಾಪಟುಗಳು ಇಂತಹ ಆದರ್ಶಗಳ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ರಾಫೆಲ್ ನಡಾಲ್ ಕೂಡ ಲಸಿಕೆ ಹಾಕಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂಬುದಾಗಿ ಸ್ಪೇನ್‌ನ ವಿದೇಶಾಂಗ ಸಚಿವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!