‘ಘರ್ ವಾಪ್ಸಿ’ ಮೂಲಕ ಹೊಸಬದುಕಿನ ಹೊಸ್ತಿಲು ತುಳಿದ ಜೋಡಿ!

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮಾರ್ಚ್ 30, 2022ರಂದು ಉತ್ತರ ಪ್ರದೇಶದ ಬರೇಲಿಯಲ್ಲಿ ವಿಶಿಷ್ಟ ವಿವಾಹವೊಂದು ಸಂಪನ್ನಗೊಂಡಿದೆ. ಕ್ರೈಸ್ತನಾಗಿದ್ದ ವರ, ಮುಸ್ಲಿಂ ಆಗಿದ್ದ ಯುವತಿ ಇವರಿಬ್ಬರೂ ಹಿಂದು ಪದ್ಧತಿಯ ಮೂಲಕ ವಿವಾಹವಾಗಿ ಹೊಸ ಜೀವನಕ್ಕೆ ಪ್ರವೇಶಿಸಿದ್ದಾರೆ. ಇದನ್ನು ಒಪಿಂಡಿಯಾ ವರದಿ ಮಾಡಿದೆ.

ಹಿಂದು ಯುವ ವಾಹಿನಿ ಹಾಗೂ ಅಗಸ್ತ್ಯ ಮುನಿ ಆಶ್ರಮ ಜಂಟಿಯಾಗಿ ಈ ವಿವಾಹ ನೆರವೇರುವಂತೆ ನೋಡಿಕೊಂಡಿತು.

12ನೇ ಕ್ಲಾಸಿನಿಂದಲೇ ಸುಮಿತ್ ಮತ್ತು ನೂರ್ ಪರಿಚಯವಿದ್ದರು. ಪರಸ್ಪರ ಪ್ರೀತಿಸಿ ಮದುವೆಯಾಗುವ ನಿರ್ಧಾರಕ್ಕೆ ಬಂದಾಗ ಇಬ್ಬರ ಕಡೆಯಿಂದಲೂ ಧರ್ಮ ಅಡ್ಡಿಯಾಯಿತು. ಸನಾತನ ಪದ್ಧತಿಗಳ ಬಗ್ಗೆ ಅದಾಗಲೇ ಅರಿವು ಮತ್ತು ಪ್ರೀತಿ ಹೊಂದಿದ್ದ ಸುಮಿತ್ ತಾವಿಬ್ಬರೂ ಹಿಂದು ಧರ್ಮಕ್ಕೆ ಮರಳುವ ಪ್ರಸ್ತಾಪ ಇಟ್ಟಾಗ ಅದು ನೂರ್’ಗೆ ಒಪ್ಪಿಗೆಯಾಯಿತು. ಆಕೆ ನಿಶಾ ಆಗಿ ಬದಲಾಗಿದ್ದಾಳೆ.

 

ವಿವಾಹ ಸಂದರ್ಭದಲ್ಲಿ ತಾವಿಬ್ಬರೂ ಸನಾತನ ಧರ್ಮದ ಪದ್ಧತಿಗಳನ್ನು ಜೀವನಪೂರ್ತಿ ಅನುಸರಿಸುವುದಾಗಿ ಘೋಷಿಸಿಕೊಂಡಿರುವ ನಿಶಾ, ತಾನು ಈ ಹಿಂದಿನಿಂದಲೇ ದುರ್ಗೆಯ ಭಕ್ತೆ ಎಂದು ಹೇಳಿಕೊಂಡಿದ್ದಾರೆ.

ಈ ವಿವಾಹದ ನಂತರ ಹುಡುಗಿಯ ಕುಟುಂಬವು ದೂರು ದಾಖಲಿಸಿದ್ದು, ಸುಮಿತ್ ತಮ್ಮ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿ ಮದುವೆಯಾಗಿರುವುದಾಗಿ ಆರೋಪಿಸಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!