ಶಾರುಖ್‌ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಕೇಸ್‌ ಪ್ರಕರಣದ ಪ್ರಮುಖ ಸಾಕ್ಷಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆರು ತಿಂಗಳ ಹಿಂದೆ ಬಾಲಿವುಡ್​ ನಟ ಶಾರುಖ್ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಪ್ರಭಾಕರ್​ ಸೇಲ್​ ಮೃತಪಟ್ಟಿದ್ದಾರೆ. ಕಳೆದ ವರ್ಷದ ಅಕ್ಟೋಬರ್​ನಲ್ಲಿ ಮುಂಬೈನ ಐಷಾರಾಮಿ ಕಾರ್ಡೇಲಿಯಾ ಕ್ರೂಸ್​ ಶಿಪ್​​ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನಡೆಸಿದ್ದ ದಾಳಿ ವೇಳೆ ಡ್ರಗ್ಸ್​ ಪಾರ್ಟಿ ನಡೆಸುತ್ತಿದ್ದ ಆರ್ಯನ್ ಖಾನ್​, ಅರ್ಬಾಜ್ ಮರ್ಚೆಂಟ್, ಮುನ್ಮುಮ್ ಧಮೇಚಾ ಸೇರಿದಂತೆ 15 ಜನರು ಸಿಕ್ಕಿಬಿದ್ದಿದ್ದರು.
ಪ್ರಕರಣದಲ್ಲಿ ಜೈಲುಸೇರಿದ್ದ ಆರ್ಯನ್ ಖಾನ್​ ಸಧ್ಯ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಆರ್ಯನ್ ಮತ್ತು ಅವನ ಸ್ನೇಹಿತರು ಡ್ರಗ್‌ ಡೀಲ್‌ ಕುರಿತಾಗಿ ನಡೆಸಿರುವ ಚಾಟ್‌ ಗಳು ಪತ್ತೆಯಾಗಿದ್ದು, ಅವರು ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾದೊಂದಿಗೆ ಸಂಪರ್ಕ ಹೊಂದಿರುವುದು ಎನ್‌ಸಿಬಿ ತನಿಳೆ ವೇಳೆ ಪತ್ತೆಯಾಗಿತ್ತು. ಆದರೆ, ಬಾಂಬೆ ಹೈಕೋರ್ಟ್ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು.
ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಪ್ರಭಾಕರ್​ ಸೇಲ್​ ಶುಕ್ರವಾರ ಮುಂಬೈನ ಚೆಂಬೂರಿನ ಮಹುಲ್ ಪ್ರದೇಶದ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲವು ದಿನಗಳ ಹಿಂದೆ ದೆಹಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂಬೈಗೆ ಭೇಟಿ ನೀಡಿ ಸೈಲ್ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು ಎಂದು ಪ್ರಭಾಕರ್ ಸೈಲ್ ಅವರ ವಕೀಲರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!