ರಾಜ್ಯದ ಈ ಎರಡು ಕಡೆಗಳಲ್ಲಿ ಬಳಸ್ತಿರೋ ತುಪ್ಪ ಸೇಫ್‌ ಇಲ್ಲ, ಆಹಾರ ಸುರಕ್ಷತಾ ಇಲಾಖೆ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಿರುಪತಿ ಲಡ್ಡು ತಯಾರಿಕೆಗೆ ಬಳಸಲಾದ ತುಪ್ಪ  ಕಲಬೆರಕೆ ವಿವಾದ ಬೆಳಕಿಗೆ ಬರುವುದಕ್ಕೂ ಮುನ್ನವೇ ರಾಜ್ಯದಲ್ಲಿ ತುಪ್ಪ ಕಲಬೆರಕೆ ಆಗಿರುವುದು ಬೆಳಕಿಗೆ ಬಂದಿದೆ.

ಆಹಾರ ಸುರಕ್ಷತಾ ಇಲಾಖೆ 40 ಕಡೆ ತುಪ್ಪ ಸಂಗ್ರಹ ಮಾಡಿ ಟೆಸ್ಟ್ ಮಾಡಿದಾಗ ರಾಜ್ಯದ 2 ಕಡೆ ತುಪ್ಪ ಕಲಬೆರಕೆ ಆಗಿರುವುದು ಬಯಲಾಗಿದೆ.

ಆಹಾರ ಮತ್ತು ಸುರಕ್ಷತಾ ಇಲಾಖೆ ಆಗಸ್ಟ್ ತಿಂಗಳಲ್ಲಿ ತುಪ್ಪವನ್ನ ಟೆಸ್ಟ್ ಮಾಡಿದೆ. ರಾಜ್ಯಾದ್ಯಂತ 40 ಕಡೆ ಮಾದರಿ ಸಂಗ್ರಹಿಸಿ, ಬೆಂಗಳೂರು ಮತ್ತು ಬಾಗಲಕೋಟೆಯಲ್ಲಿ ತುಪ್ಪ ಸೇಫ್ ಅಲ್ಲ ಎಂದು ವರದಿ ನೀಡಿದೆ.

ಎಲ್ಲಿಯ ತುಪ್ಪ ಸೇಫ್‌ ಅಲ್ಲ ಎಂಬ ವರದಿ ಬಂದಿರುವ ಕಡೆ ತುಪ್ಪ ತಯಾರಿಕಾ ಘಟಕಕ್ಕೆ ಆಹಾರ ಮತ್ತು ಸುರಕ್ಷತಾ ಇಲಾಖೆ ನೋಟಿಸ್ ನೀಡಿದೆ. 30 ದಿನಗಳ ಒಳಗೆ ತುಪ್ಪ ಅಸುರಕ್ಷತೆ ಅಲ್ಲ ಎಂದು ಸಾಬೀತುಪಡಿಸಿಕೊಳ್ಳಲು ಇಲಾಖೆ ಸೂಚಿಸಿದೆ. ಈ ಬಗ್ಗೆ ಮೈಸೂರಿನ ಲ್ಯಾಬ್‍ನಲ್ಲಿ ಖಚಿತತೆಯ ಪರೀಕ್ಷೆ ನಡೆಯುತ್ತಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಯಾವುದೇ ವಸ್ತು ಮಾರಾಟಕ್ಕೆ ಬಂದರೆ ಅದರ ದರದಲ್ಲಿ ಕಚ್ಚಾ ಸಾಮಗ್ರಿ, ತಯಾರಿಕ ವೆಚ್ಚ, ಮಾರಾಟ ವೆಚ್ಚ, ಲಾಭ ಮತ್ತು ತೆರಿಗೆ ಸೇರಿರುತ್ತೆ. ಹಾಲಿನ ದರ 50 ರೂ ಲೀಟರ್ ಗೆ ಇದ್ದೂ ಯಾವ ಮೂರ್ಖನೂ 600 ರೂ ಲೀಟರ್ ತುಪ್ಪಕ್ಕೆ ಇಲ್ಲದೇ ಕೊಡಲಾರ. ನಾವೇ ಶಾಪ್ ನಲ್ಲಿ ಕಡಿಮೆ ಅಂದರೆ 800 ಕೊಡುವಾಗ ಯಾವುದೋ ಕಂಪನಿ 400 ರೂ ಗೆ ಕೊಟ್ಟಿತು??
    ಕಡಿಮೆ ದರದಲ್ಲಿ ಕೊಡುವ ವಸ್ಟು ಗುಣ ಮಟ್ಟ ಸರಿ ಇರಲು ಸಾಧ್ಯವೇ ಇಲ್ಲಾ.

LEAVE A REPLY

Please enter your comment!
Please enter your name here

error: Content is protected !!