ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಬದುಕಿನ ವಿಭಿನ್ನ ಹಂತಗಳಲ್ಲಿ ಏಳುಬೀಳುಗಳ ನಡುವೆಯೂ ನನ್ನ ಕೆಲಸವನ್ನು ದೇಶ ಗುರುತಿಸಿದಾಗ ಖುಷಿ ಎನಿಸುವುದು ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಹೇಳಿದ್ದಾರೆ.
ದೆಹಲಿಯಲ್ಲಿ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಒಬ್ಬರು ನನ್ನ ಕೆಲಸವನ್ನು ಗುರುತಿಸಿದ್ದು ನನಗೆ ಖುಷಿ ನೀಡಿದೆ. ನಾನು ಯಾವಾಗಲೂ ಜನರಿಗಾಗಿ ಕೆಲಸ ಮಾಡಲು ಶ್ರಮಿಸುತ್ತೇನೆ. ನಾನು ಸಾಮಾಜಿಕ ಅಥವಾ ರಾಜಕೀಯ ಕ್ಷೇತ್ರದಲ್ಲಿ ಅಥವಾ ಜಮ್ಮು ಕಾಶ್ಮೀರದ (ಮಾಜಿ) ಮುಖ್ಯಮಂತ್ರಿಯಾಗಿದ್ದಾಗಲೂ ಜನರಿಗಾಗಿ ಯಾವಾಗಲೂ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮತ್ತು ದೇಶದ ಜನರು ನೀಡಿದ ಪ್ರಶಸ್ತಿಯಿಂದ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು.
ಗುಲಾಂ ನಬಿ ಅಜಾದ್ ಈ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಕಾಂಗ್ರೆಸ್‌ನ ಒಂದು ವರ್ಗದ ನಾಯಕರಿಂದ ಟೀಕೆಗೂ ಒಳಗಾಗಿದ್ದರು.