ಚಳಿಗಾಲದಲ್ಲಿ ಋತುಮಾನದ ಕಾಯಿಲೆಗಳಿಂದ ರಕ್ಷಿಸುವ ಬೆಲ್ಲದ ಚಹಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಳಿಗಾಲದಲ್ಲಿ ಬೆಳ್ಳಂ ಬೆಳಿಗ್ಗೆ ಬಿಸಿ ಬಿಸಿಯಾಗಿ ಕಾಫಿ, ಟೀ ಕುಡಿಯುವುದು ವಾಡಿಕೆ.  ಆದರೆ, ಕಾಫಿ ಬದಲು ಟೀ ಕುಡಿದರೆ ಅದರಲ್ಲೂ ಬೆಲ್ಲದ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಅದೆಷ್ಟೋ ಪ್ರಯೋಜನಗಳಿವೆ. ಟೀ ಕುಡಿಯಲು ಇಷ್ಟವಿಲ್ಲದವರು ಚಳಿಗಾಲದಲ್ಲಿ ಒಮ್ಮೆಯಾದರೂ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಚಳಿಗಾಲದಲ್ಲಿ ಹೆಚ್ಚು ಟೀ ಕುಡಿಯುವವರು ಸಿಹಿಗಾಗಿ ಸಕ್ಕರೆಯ ಬದಲು ಬೆಲ್ಲವನ್ನು ಬಳಸಬೇಕು. ಬೆಲ್ಲದ ಜೊತೆಗೆ ಏಲಕ್ಕಿ, ಶುಂಠಿ, ಲವಂಗವನ್ನು ಸಹ ಚಹಾಕ್ಕೆ ಸೇರಿಸಿ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ.

ಅಧಿಕ ತೂಕದಿಂದ ಬಳಲುತ್ತಿರುವವರು ಪ್ರತಿದಿನ ಬೆಲ್ಲದ ಚಹಾವನ್ನು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ದೇಹದಲ್ಲಿರುವ ಕೊಬ್ಬು ಕರಗುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಚಳಿಗಾಲದಲ್ಲಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಹಾಗಾಗಿ ಪ್ರತಿದಿನ ಬೆಲ್ಲದ ಟೀ ಕುಡಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.

ಚಳಿಗಾಲದಲ್ಲಿ ಕೆಮ್ಮು ಮತ್ತು ನೆಗಡಿ ಸ್ವಾಭಾವಿಕವಾಗಿ ಬರುತ್ತದೆ. ಇವುಗಳನ್ನು ತಪ್ಪಿಸಲು ಪ್ರತಿದಿನ ಬೆಲ್ಲದ ಟೀ ಕುಡಿಯಿರಿ. ಬೆಲ್ಲದ ಚಹಾವು ಆಂಟಿ-ಆಕ್ಸಿಡೆಂಟ್ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ಇದರಿಂದಾಗಿ ಋತುಮಾನದ ರೋಗಗಳು ಕಡಿಮೆಯಾಗುತ್ತವೆ. ಬೆಲ್ಲದ ಟೀ ಕುಡಿದರೆ ಶೀತದ ತೀವ್ರತೆಯಿಂದ ಮುಕ್ತಿ ಪಡೆಯಬಹುದು. ಚಹಾವನ್ನು ಪ್ರತಿದಿನ ಸೇವಿಸುವುದರಿಂದ ರಕ್ತವನ್ನು ಶುದ್ಧೀಕರಿಸುತ್ತದೆ. ಆಯುರ್ವೇದ ಹೇಳುವಂತೆ ರಕ್ತದಲ್ಲಿರುವ ತ್ಯಾಜ್ಯಗಳು ಹೊರಗೆ ಹೋಗುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!