ಲವ್‌ ಬ್ರೇಕ್‌ ಅಪ್‌ ಆದ್ಮೇಲೆ ಅದರಿಂಚ ಆಚೆ ಬರುವುದು ಹೇಗೆ ?

ಪ್ರೀತಿಯ ಯಾರಿಗೂ ಹೇಳಿ ಕೇಳಿ ಆಗಲ್ಲ, ಹಾಗಂತ ಪ್ರೀತಿಗೆ ಕಣ್ಣಿಲ್ಲ ಅಂತಲ್ಲ ಅದರ ಆಳ ಮತ್ತು ಅಗಲ ಅಷ್ಟೊಂದು ತೀವ್ರತೆಯನ್ನು ಹೊಂದಿರುತ್ತದೆ.

ಬೆಳ್ಳಗಿರೋದೆಲ್ಲಾ ಹಾಲಲ್ಲ ಹಾಗಂತ ಎಲ್ಲ ಪ್ರೀತಿಯೂ ಸುಳ್ಳಲ್ಲ. ಪ್ರೀತಿ ಮಾಡಿದ್ಮೇಲೆ ಇದೆಲ್ಲಾ ಕಾಮನ್‌ ಗುರು… ಬ್ರೇಕ್‌ ಅಪ್‌ ಆದ್ರೂ ಪ್ಯಾಚ್‌ ಅಪ್‌ ಆದ್ರೂ ಅದ್ರಿಂದ ಆಚೆ ಬರೋದಕ್ಕೆ ದಾರಿ ಹುಡುಕ್ಬೇಕು.

ಪ್ರೀತಿ ಎರಡು ಹೃದಯಗಳ ನಡುವೆ ಮೂಡುವ ಸಂಬಂಧ, ಇಲ್ಲಿ ಹೊಂದಾಣಿಕೆಯೂ ಮೂಡಬಹುದು ಅಥವಾ ವೈಮನಸ್ಸುಗಳು ಎದುರಾಗಬಹುದು. ಒಮ್ಮೆ ಒಬ್ಬ ಹುಡುಗ ಅಥವಾ ಹುಡುಗಿ ಪ್ರೀತಿಯಲ್ಲಿ ಬ್ರೇಕ್‌ ಅಪ್‌ ಆದರೆ ಅದರಿಂದ ಆಚೆ ಬರಲು ಈ ಸೂತ್ರಗಳನ್ನು ಅನುಸರಿಸಿ.

* ಮೊದಲು ವಾಸ್ತವವನ್ನು ಒಪ್ಪಿಕೊಳ್ಳಿ.
* ನೀವು ಪ್ರೀತಿಸಿದವರಿಂದ ಆದಷ್ಟು ದೂರವಿರಲು ಪ್ರಯತ್ನಿಸಿ.
* ನಿಮ್ಮ ಪ್ರೀತಿಯ ಬಗ್ಗೆ ಮತ್ತು ಪ್ರೀತಿಸಿದವರ ಬಗ್ಗೆ ಮಾತನಾಡುವುದನ್ನು ಆದಷ್ಟು ನಿಯಂತ್ರಿಸಿ.
* ಬ್ರೇಕ್‌ ಅಪ್‌ ಆದ್ಮೇಲೆ ಸದಾ ನೀವು ಪ್ರೀತಿಸಿದ ಅವಳನ್ನು ಅಥವಾ ಅವನನ್ನು ಬೈಯ್ಯುವುದನ್ನು ನಿಲ್ಲಿಸಿ.
* ಯಾವುದೇ ಘಟನೆಗಳ ಹಿಂದೆ ಒಂದು ಕಾರಣವಿರುತ್ತದೆ, ಅದನ್ನು ಅರ್ಥ ಮಾಡಿಕೊಂಡು ಅದರಿಂದ ಪಾಠ ಕಲಿಯಿರಿ.
* ಹಿಂದೆ ನಡೆದ ಕಹಿ ಘಟನೆಗಳನ್ನು ಮರೆತು ಮುಂದೆ ನಡೆಯುವ ಕುರಿತು ಆಲೋಚಿಸಿ ಮತ್ತು ಅದಕ್ಕೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳಿ.
* ನೀವು ನಿಮ್ಮ ಮುಂದಿನ ಗುರಿಗಳತ್ತ ಗಮನ ಕೊಡಿ.
* ನಿಮ್ಮ ಮುಂದಿನ ದಿನಗಳಲ್ಲಿ ವಿನಾ ಕಾರಣ ಹಿಂದಿನ ಘಟನೆಗಳನ್ನು ನೆನೆದು ದುಃಖಿಸದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!