ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಬೆಳಗಾವಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹಾವು ಕಡಿತದಿಂದ ಬಾಲಕಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಟವಾಡುತ್ತಿದ್ದ ಬಾಲಕಿ ಮನೆಯೊಳಗೆ ಹೋಗುವಾಗ ಬಾಗಿಲಲ್ಲೇ ಇದ್ದ ಹಾವು ಕಚ್ಚಲು ಯತ್ನಿಸಿದೆ. ಅದೃಷ್ಟವಶಾತ್ ಬಾಲಕಿ ಬಚಾವಾಗಿದ್ದಾಳೆ.
ಹಠಾತ್ ಘಟನೆಯಿಂದ ಗಾಬರಿಗೊಂಡ ಬಾಲಕಿ ಮನೆಯೊಳಗೆ ಓಡಿ ಬಂದಿದ್ದಾಳೆ. ನಂತರ ಹಾವು ಹೊರಟು ಹೋಗುವುದು ವಿಡಿಯೋದಲ್ಲಿ ಕಂಡು ಬಂತು.