ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣದಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಅವರ ವಿರುದ್ಧ ಅವಹೇಳನಾಕಾರಿ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮರಳಿಗ ಗ್ರಾಮದ ಶಿವರಾಜ್ ಎಂಬಾತ ಗೃಹ ಸಚಿವರ ವಿರುದ್ಧ ಪೋಸ್ಟ್ ಮಾಡಿದ್ದ. ಈತ ತನ್ನ ಪೋಸ್ಟ್‌ನಲ್ಲಿ ಜಿ. ಪರಮೇಶ್ವರ್ ಒಬ್ಬ ಅಯೋಗ್ಯ, ತನ್ನ ಸ್ವಂತ ಮಗನನ್ನು ಉಳಿಸಿಕೊಳ್ಳಲು ಅವನಿಂದ ಆಗಲಿಲ್ಲ. ಅಂಬೇಡ್ಕರ್ ಆಶಯ ಉಳಿಸಲಿಲ್ಲ. ಈಗ ಆರ್‌ಎಸ್‌ಎಸ್‌ನವರ ಜೊತೆ ನಂಟು? ಈ ನಂಟಿನ ಗುಟ್ಟೇನು? ತಾಕತ್ ಇದ್ದವರು ಉತ್ತರಿಸಿ ಎನ್ನುವ ಪೋಸ್ಟ್ ಮಾಡಿದ್ದಾನೆ.
ಮದ್ದೂರು ಕಾಂಗ್ರೆಸ್ ಮುಖಂಡತರು ಶಿವರಾಜ್ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.