ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಬೀದಿಯಲ್ಲಿ ಹಬ್ಬ-ಹರಿದಿನ, ಜಾತ್ರೆಗಳಲ್ಲಿ ಬಲೂನ್‌ಗಳನ್ನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದ ಹುಡುಗಿ ಇದೀಗ ರಾತ್ರೋರಾತ್ರಿ ರೂಪದರ್ಶಿಯಾಗಿ ಬದಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇವಳ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೌದು, ಕೇರಳದ ಕಣ್ಣೂರಿನಲ್ಲಿ ನಡೆಯುತ್ತಿದ್ದ ಜಾತ್ರೆಯೊಂದರಲ್ಲಿ ಬಲೂನ್ ಮಾರಾಟ ಮಾಡ್ತಿದ್ದ ಈ ಬಾಲಕಿಯ ಹೆಸರು ಕಿಸ್ಬು. ಕೇರಳದ ವಿವಿಧ ಪ್ರದೇಶಗಳಲ್ಲಿ ಬಲೂನ್ ಮಾರುತ್ತಾ ಜೀವನ ಸಾಗುಸುತ್ತಿದ್ದ ರಾಜಸ್ಥಾನದ ಈ ಬಾಲಕಿಯ ಕೇವಲ ಒಂದೇ ಒಂದು ಆಕರ್ಷಕ ಫೋಟೋ ಇದೀಗ ಆಕೆ ತಾರೆಯಾಗಿ ಬದಲಾಗಿದ್ದಾಳೆ.
ಈಕೆ ಜಾತ್ರೆಯಲ್ಲಿ ಬಲೂನ್ ಮಾರುತ್ತಿದ್ದ ವೇಳೆ ಫೋಟೋಗ್ರಾಫರ್ ಓರ್ವನ ಗಮನ ಸೆಳೆದಿದ್ದಾಳೆ. ಆತ ಬಾಲಕಿಯ ಸಹಜ ಭಂಗಿಯಲ್ಲೇ ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ.ಬಳಿಕ ಆಗಿದ್ದು ಎಲ್ಲವೂ ಪವಾಡ ಎಂದರೆ ತಪ್ಪಾಗಲಾರದು, ಈ ಫೋಟೋಗೆ ಇನ್ನಿಲ್ಲದ ಪ್ರತಿಕ್ರಿಯೆ ಬರೋಕೆ ಶುರುವಾಗಿದೆ.
ಬಳಿಕ ಆ ಬಾಲಕಿಗೆ ಕೇರಳದ ಸಾಂಪ್ರದಾಯಿಕ ಸೆಟ್ ಹಾಗೂ ಆಭರಣಗಳನ್ನು ಬಾಲಕಿಗೆ ತೊಡಿಸಿ ಆಕರ್ಷಕ ರೀತಿಯಲ್ಲಿ ಫೋಟೋಶೂಟ್ ನಡೆಸಲಾಗಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಉದ್ಘಾರದಿಂದ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಕಿ ಮಾಡೆಲ್ ಆಗಿಯೂ ಬದಲಾಗಿದ್ದಾಳೆ.