ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಉಕ್ರೇನ್ ಉದ್ವಿಗ್ನತೆ ಹೆಚ್ಚುತ್ತಲೇ ಇರುವ ನಡುವೆ ದೇಶದಲ್ಲಿ ಬುಧವಾರ ಬಂಗಾರ ಮತ್ತು ಬೆಳ್ಳಿ ದರ ಮತ್ತೆ ಏರಿಕೆಯಾಗಿದ್ದು, ಪ್ರತಿ 10 ಗ್ರಾಂ ಚಿನ್ನಕ್ಕೆ 328 ರೂ. ಮತ್ತು ಒಂದು ಕೆಜಿ ಬೆಳ್ಳಿಗೆ 965 ರೂ. ಹೆಚ್ಚಳವಾಗಿದೆ.
ಈ ಮೂಲಕ10 ಗ್ರಾಂ ಚಿನ್ನವು 54,552 ರೂ.ಗೆ ಬಂದು ತಲುಪಿದೆ. ಅದೇ ರೀತಿ ಒಂದು ಕೆಜಿ ಬೆಳ್ಳಿಗೆ 74,350 ರೂ. ಆಗಿದೆ.
ದೇಶಿದಲ್ಲಿ ಚಿನ್ನ ದರದಲ್ಲಿ ಶೇ.0.6ರಷ್ಟು ಏರಿಕೆಯಾಗಿದ್ದರೆ, ಜಾಗತಿಕವಾಗಿ ಶೇ.0.54ರಷ್ಟು ಹೆಚ್ಚಳ ಕಂಡಿದೆ. ಬೆಳ್ಳಿ ದರದಲ್ಲೂ ದೇಶಿಯವಾಗಿ ಶೇ.1.35ರಷ್ಟು ಹೆಚ್ಚಳವಾಗಿದ್ದು, ಜಾಗತಿಕವಾಗಿ ಶೇ.0.74ರಷ್ಟು ಏರಿಕೆಯಾಗಿದೆ.
ಇದರ ಜೊತೆಗೆ ಕಚ್ಚಾ ತೈಲ ಬೆಲೆಯೂ ಗಗನಕ್ಕೇರಿದೆ. ಪ್ರತಿ ಬ್ಯಾರೆಲ್ಗೆ ಶೇ.1.88ರಷ್ಟು ಅಂದರೆ 177 ರೂ. ಅಧಿಕವಾಗಿದ್ದು, ಇದರ ದರ 9,615 ರೂ. ಬಂದು ತಲುಪಿದೆ. ಜಾಗತಿಕವಾಗಿ ಪ್ರತಿ ಬ್ಯಾರೆಲ್ಗೆ ಶೇ.1.18ರಷ್ಟು ಕಚ್ಚಾ ತೈಲ ದರ ಏರಿಕೆಯಾಗಿದೆ.