Sunday, August 14, 2022

Latest Posts

ಕ್ಷುಲ್ಲಕ ಕಾರಣಕ್ಕೆ ಯುವತಿಯರ ರಂಪಾಟ: ಜುಟ್ಟು ಹಿಡಿದು ಹೊಡೆದಾಡಿದ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕ್ಷುಲ್ಲಕ ಕಾರಣಕ್ಕೆ ಎರಡು ಯುವತಿಯರ ತಂಡ ಜುಟ್ಟು ಹಿಡಿದು ಹೊಡೆದಾಡಿಕೊಂಡಿರುವ ಘಟನೆ ಜಾರ್ಖಾಂಡ್‌ನಲ್ಲಿ ನಡೆದಿದೆ. ಡಿಸ್ನಿಲ್ಯಾಂಡ್ ಮೇಳದಲ್ಲಿ ಯುವತಿ ನಡೆದುಕೊಂಡು ಹೋಗುತ್ತಿದ್ದ ವೇಳೆಮತ್ತೊಬ್ಬ ಯುವತಿಯ ಮೇಲೆ ಕೆಸರು ಬಿದ್ದಿದೆ ಎಂಬ ಕಾರಣಕ್ಕೆ ಜಗಳ ಆರಂಭವಾಗಿದೆ. ಜಗಳ ತಾರಕಕ್ಕೇರಿ ಇಬ್ಬರೂ ಹೊಡೆದಾಟ ಶುರು ಮಾಡಿದ್ದಾರೆ.

ಸ್ಥಳದಲ್ಲಿಯೇ ಇದ್ದ ಸ್ನೇಹಿತೆಯರೂ ಕೂಡ ಹೊಡೆದಾಟಕ್ಕಿಳಿದಿದ್ದಾರೆ. ಎರಡೂ ಕಡೆಯವರು ಜುಟ್ಟು ಹಿಡಿದು ಹೊಡೆದಾಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಬಾಯ್‌ಫ್ರೆಂಡ್‌ ವಿಚಾರಕ್ಕೆ  ಗಲಾಟೆ ನಡೆದಿದೆ ಎನ್ನಲಾಗುತ್ತಿದ್ದು, ಸತ್ಯಾಂಶ ಹೊರಬಂದಿಲ್ಲ.

ಇವರ ಗಲಾಟೆ ನೋಡಿ ಅಲ್ಲಿದ್ದ ಜನರಿಗೆ ಶಾಕ್‌ ಆಗಿದೆ, ಇವರೇನು ಹೆಣ್ಣಮಕ್ಕಳ, ಹೆಮ್ಮಾರಿಗಳ ಅನ್ನುವಷ್ಟು ಮಟ್ಟಿಗೆ ಗಲಾಟೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss