ಗೀತಾಂಜಲಿ ಕೃತಿ ಕನ್ನಡಾನುವಾದ: ಲೇಖಕ ಗಿರೀಶ್ ಗೆ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಅನುವಾದ ಪ್ರಶಸ್ತಿ

ದಿಗಂತ ವರದಿ ಕಲಬುರಗಿ:

ಸಾಹಿತಿ ಹಾಗೂ ಲೇಖಕ ಗಿರೀಶ ಜಕಾಪುರೆಯವರು ಅನುವಾದಿಸಿದ ರವೀಂದ್ರನಾಥ ಟ್ಯಾಗೋರ್ ಅವರ ಪ್ರಶಸ್ತಿ ವಿಜೇತ ಗೀತಾಂಜಲಿ ಕೃತಿಯ ಕನ್ನಡಾನುವಾದಕ್ಕೆ 2020 ನೇ ಸಾಲಿನ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಅನುವಾದ ಪ್ರಶಸ್ತಿಯು ಲಭಿಸಿದೆ.

ಗುಲಬರ್ಗಾ ವಿಶ್ವವಿದ್ಯಾಲಯ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಲೇಖಕರಿಗೆ, ಪ್ರಕಾಶಕರಿಗೆ ಹಾಗೂ ಕಲಾವಿದರಿಗೆ ಕೊಡಮಾಡುವ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ವಿವಿಯ ಪ್ರಸಾರಾಂಗ, ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ. ಎಚ್. ಟಿ. ಪೋತೆ ಪ್ರಕಟಿಸಿದಾಗಿ ತಿಳಿಸಿದ್ದಾರೆ.

ಪ್ರಶಸ್ತಿಯು 5 ಸಾವಿರ ರೂ ನಗದು ಗೌರವಧನ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದ್ದು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು 2022 ರ ಜನವರಿ 21 ಶುಕ್ರವಾರದಂದು ಗುಲಬರ್ಗಾ ವಿವಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ವಿವಿಯ ಕುಲಪತಿ ಪ್ರೋ. ದಯಾನಂದ ಅಗಸರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನಿಪ್ಪಾಣಿಯ ಅಜಬ್ ಪಬ್ಲಿಕೇಷನ್ ಪ್ರಕಟಿಸಿರುವ ಗೀತಾಂಜಲಿಯ ಕನ್ನಡ ಆವೃತ್ತಿಯಲ್ಲಿ ಮೂಲ ಗೀತಾಂಜಲಿಯ103  ಕವಿತೆಗಳು ಹಾಗೂ ಟ್ಯಾಗೋರರ ಇತರೆ ಕಾವ್ಯಕೃತಿಗಳಾದ ನೈವೇದ್ಯ, ಗೀತಮಾಲ್ಯ, ಖೇಯಾದಲ್ಲಿನ ಆಯ್ದ ಕವಿತೆಗಳು ಸೇರಿ ಒಟ್ಟು 206 ಕವಿತೆಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!