ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ಖ್ಯಾತಿ ದಿವ್ಯಾ ಸುರೇಶ್ಗೆ ಅಪಘಾತವಾಗಿದೆ. ವ್ಯಾಕ್ಸಿನ್ ಪಡೆದು ಮರಳಿ ಮನೆಗೆ ಬರುವಾಗ ದಿವ್ಯಾ ಸ್ಕೂಟಿಗೆ ನಾಯಿ ಅಡ್ಡ ಬಂದಿದೆ. ಸಣ್ಣಪುಟ್ಟ ಗಾಯಗಳಾಗಿದ್ದು, ದಿವ್ಯಾ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ನಾಯಿ ಅಡ್ಡ ಬಂದ ಕಾರಣ ಅದನ್ನು ತಡೆಯಲು ಸಡನ್ ಬ್ರೇಕ್ ಹಾಕಿದಾಗ ಅಪಘಾತವಾಗಿದೆ.
ಈ ಬಗ್ಗೆ ದಿವ್ಯಾ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಇದ್ದು, ದಿವ್ಯಾಗೆ ಅಪಘಾತವಾಗಿದೆ. ಕೆಲವು ದಿನಗಳು ಆಕೆ ಸಾಮಾಜಿಕ ಜಾಲತಾಣಗಳಿಂದ ದೂರ ಇರುತ್ತಾರೆ. ಶೀಘ್ರ ಹುಷಾರಾಗಲಿ ಎಂದು ಪ್ರಾರ್ಥಿಸಿ ಎಂದು ಅಭಿಮಾನಿಗಳಿಗೆ ಕೇಳಲಾಗಿದೆ. ದಿವ್ಯಾ ಅಕೌಂಟ್ನಿಂದ ಅವರ ಆಪ್ತರು ಪೋಸ್ಟ್ ಮಾಡಿದ್ದಾರೆ.