ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸಲ್ಮಾನ್ ಖಾನ್ ಆಪ್ತ, ಮಾಜಿ ಶಾಸಕ ಬಾಬಾ ಸಿದ್ಧಿಕಿಯನ್ನು ಕೆಲ ದಿನಗಳ ಹಿಂದಷ್ಟೆ ಮುಂಬೈನಲ್ಲಿ ಕೆಲ ಅಗಂತುಕರು ಹತ್ಯೆ ಮಾಡಿದ್ದಾರೆ.
ಇದಾದ ಬಳಿಕಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ತಾನೇ ಕೊಲೆ ಮಾಡಿಸಿದ್ದು ಎಂದು ಬಹಿರಂಗ ಹೇಳಿಕೆಯನ್ನು ನೀಡಿದ್ದ, ಜೊತೆಗೆ ಲಾರೆನ್ಸ್ ಬಿಷ್ಣೋಯಿ ತಂಡ ಮುಂದಿನ ಗುರಿ ಸಲ್ಮಾನ್ ಖಾನ್ ಎಂದಿದೆ.
ಇದರ ನಡುವೆ ಸಲ್ಮಾನ್ ಖಾನ್ ಮಾಜಿ ಗೆಳತಿ ಸೋಮಿ ಅಲಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ‘ನಿಮ್ಮ ಮೊಬೈಲ್ ಸಂಖ್ಯೆ ಕೊಡಿ, ವಿಡಿಯೋ ಕಾಲ್ ಮಾಡ್ತೀನಿ’ ಎಂದಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಓರ್ವ ಗ್ಯಾಂಗ್ಸ್ಟರ್. ಆತ ಜೈಲಿನಲ್ಲಿದ್ದುಕೊಂಡೇ ಎಲ್ಲವನ್ನೂ ಪ್ಲ್ಯಾನ್ ಮಾಡುತ್ತಿದ್ದಾನೆ. ಆತ ಸಲ್ಮಾನ್ ಖಾನ್ನ ಮುಗಿಸುವ ಆಲೋನಚೆಯಲ್ಲಿ ಇದ್ದಾನೆ. ಇದು ಸೋಮಿಗೆ ಇಷ್ಟ ಆಗಿಲ್ಲ. ಅವರು ಲಾರೆನ್ಸ್ ಬಿಷ್ಣೋಯ್ನ ಫೋಟೋ ಹಂಚಿಕೊಂಡು ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ.
ಇದು ಲಾರೆನ್ಸ್ ಬಿಷ್ಣೋಯ್ಗೆ ನೇರ ಸಂದೇಶ. ಸಹೋದರ ಲಾರೆನ್ಸ್ ಅವರೇ, ನೀವು ಜೈಲಿನಲ್ಲಿ ಇದ್ದುಕೊಂಡೇ ಜೂಮ್ ಕಾಲ್ ಮಾಡುತ್ತಿದ್ದೀರಿ ಎಂದು ಗೊತ್ತಾಯಿತು. ನಾನು ನಿಮ್ಮ ಜೊತೆ ಮಾತನಾಡಬೇಕು. ಇದನ್ನು ಮಾಡಲು ಹೇಗೆ ಸಾಧ್ಯ’ ಎಂದು ಸೋಮಿ ಪ್ರಶ್ನೆ ಮಾಡಿದ್ದಾರೆ.
‘ಇಡೀ ವಿಶ್ವದಲ್ಲಿ ರಾಜಸ್ಥಾನ ನನ್ನ ಫೇವರಿಟ್ ಜಾಗ. ನಾನು ನಿಮ್ಮ ದೇವಸ್ಥಾನಕ್ಕೆ ಪೂಜೆ ಮಾಡಲು ಬರಬೇಕು. ಮೊದಲು ಜೂಮ್ ಕಾಲ್ನಲ್ಲಿ ಮಾತನಾಡೋಣ. ಪೂಜೆಯ ಬಳಿಕ ಮತ್ತಷ್ಟು ಮಾತಾಡೋಣ. ಈ ಮಾತುಕತೆಯಿಂದ ನಿಮಗೆ ಲಾಭ ಇದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಹಂಚಿಕೊಂಡರೆ ಅದರಿಂದ ಉಪಕಾರವಾಗುತ್ತದೆ, ಧನ್ಯವಾದಗಳು’ ಎಂದಿದ್ದಾರೆ .