ಹೊಸದಿಗಂತ ವರದಿ, ಅಂಕೋಲಾ:
ಪಟ್ಟಣದ ಮಠಾಕೇರಿಯ ಶ್ರೀ ಕುಂಡೋದರಿ ಮಹಾಮಾಯಾ ದೇವಾಲಯದಲ್ಲಿ ಭೂಮಿ ಹುಣ್ಣಿಮೆಯ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ವಡೆ ಪೂರ್ಣಿಮೆಯ ಪ್ರಯುಕ್ತ ವಾರ್ಷಿಕ ಸಂಪ್ರದಾಯದಂತೆ ಗಾಂವಕರ್ ಮನೆತನದ ವಿನೋದ ಕಾಮತ್ ಅವರು ಕುದಿಯುವ ಎಣ್ಣೆ ಕಾವಲಿಯಿಂದ ವಡೆ ತೆಗೆಯುವ ಕಾರ್ಯಕ್ರಮವನ್ನು ನೆರವೇರಿಸಿದರು.
ಶ್ರೀಕುಂಡೋದರಿ ದೇವಿಯ ಸನ್ನಿಧಿಯಲ್ಲಿ ವಿಶೇಷ ಹವನ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ವಡೆ ಪ್ರಸಾದ ವಿತರಣೆ ನಡೆಯಿತು.
ರಾಜ್ಯ ಮತ್ತು ಹೊರ ರಾಜ್ಯಗಳಿಂದ ನೂರಾರು ಸಂಖ್ಯೆಯಲ್ಲಿ ಕುಳಾವಿ ಜನರು ಆಗಮಿಸಿ ದೇವಿಯ ಸನ್ನಿಧಿಯಲ್ಲಿ ವಿಶೇಷ ಸೇವಾ ಕಾರ್ಯಗಳನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿದರು.
ತಾಲೂಕಿನ ಅವರ್ಸಾದ ಸುಪ್ರಸಿದ್ಧ ಕಾತ್ಯಾಯಿನಿ ಬಾಣೇಶ್ವರ ದೇವಾಲಯದಲ್ಲಿ ಭೂಮಿ ಹುಣ್ಣಿಮೆಯ ಪ್ರಯುಕ್ತ ವಡೆ ತೆಗೆಯುವ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆ ನಡೆಯಿತು.
ಸಹಸ್ರಾರು ಜನ ಭಕ್ತರು ಆಗಮಿಸಿ ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಿದರು.