ಮೊದಲು ಅಕ್ಕಿ ಹಾಗೂ ಹೆಸರುಬೇಳೆ ನೆನೆಸಿಡಿ, ಅರ್ಧ ಕಪ್ ಬೇಳೆ ಹಾಕಿದ್ರೆ ಒಂದು ಕಪ್ ಅಕ್ಕಿ ಹಾಕಿ
ನಂತರ ಹೆಸರುಕಾಳನ್ನು ಹಿಂದಿನ ದಿನವೇ ನೆನೆಸಿಟ್ಟುಕೊಳ್ಳಿ
ನಂತರ ಕುಕ್ಕರ್ಗೆ ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವು ಹಾಕಿ
ನಂತರ ಹಿಂಗ್ ಹಾಕಿ ಈರುಳ್ಳಿ ಹಾಕಿ
ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಟೊಮ್ಯಾಟೊ ಹಾಕಿ ಕೊತ್ತಂಬರಿ ಹಾಕಿ ಅರಿಶಿಣ ಪುಡಿ, ಗರಂ ಮಸಾಲಾ ಹಾಕಿ ಬಾಡಿಸಿ
ನಂತರ ಹೆಸರುಕಾಳು, ಅಕ್ಕಿ ಬೇಳೆ, ಉಪ್ಪು, ಕೊತ್ತಂಬರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಅಕ್ಕಿ ಬೇಳೆಯ ಮೂರರಷ್ಟು ನೀರು ಹಾಕಿ ಸಣ್ಣ ಉರಿಯಲ್ಲಿ ಎರಡು ವಿಶಲ್ ಕೂಗಿಸಿದ್ರೆ ಕಿಚಡಿ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ