MENTAL HEALTH | ಜನರ ಕೆಟ್ಟ ಕಮೆಂಟ್‌ಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳೋದು ಹೇಗೆ?

ಮೇಘನಾ ಶೆಟ್ಟಿ ಶಿವಮೊಗ್ಗ

ಸ್ಕೂಲ್‌ನಲ್ಲಿ ಪ್ರಶಾಂತ್‌ ನನ್‌ ಕೂದ್ಲು ಪಾತ್ರೆ ತಿಕ್ಕೋ ಬ್ರಶ್‌ ಥರ ಇದೆ ಅಂತ ನಾನ್‌ ಹೋಗಲ್ಲ ಸ್ಕೂಲಿಗೆ..

ನೀನ್‌ ಆ ಹುಡ್ಗನಷ್ಟ್‌ ಅಟ್ರಾಕ್ಟೀವ್‌ ಇಲ್ಲ, ಬರೀ ಬೈಕ್‌ ಅಲ್‌ ಕಾಲೇಜಿಗ್‌ ಬರ್ತ್ಯಾ, ನಂಗ್‌ ಮಿಡಲ್‌ ಕ್ಲಾಸ್‌ ಜನ ಇಷ್ಟ ಆಗಲ್ಲ ಅಂತ ನೀತು ಹೇಳಿದ್‌ ತುಂಬಾ ಹರ್ಟ್‌ ಆಗಿತ್ತು..

ಹೀಗೇನ್ರಿ ಕೆಲ್ಸ ಮಾಡೋದು? ಆಗಲ್ಲ ಅಂದ್ರೆ ಬಿಟ್‌ ಹೋಗ್ರಿ ಅಂತ ಬಾಸ್‌ ಬೈದ್ರು. ಬಟ್‌ ನಿಮ್‌ ತಪ್‌ ಏನೂ ಇರ್ಲಿಲ್ಲ. ಅದನ್‌ ಕೇಳ್ಸ್ಕೊಳಕ್‌ ಅವ್ರ್‌ ರೆಡಿ ಇಲ್ದೆ ಎಲ್ಲಾರ್‌ ಎದ್ರಿಗ್‌ ಮರ್ಯಾದಿ ತಗುದ್ರು. ಆಫೀಸಿಗ್‌ ಹೇಗ್‌ ಹೋಗ್ಲಿ?

ಸವಿತಾ ಜಾಸ್ತಿ ಸುಳ್‌ ಹೇಳ್ಬೇಡ ನೀನ್‌ ಪೊಸೆಸಿವ್‌ ಆಗಿದ್ಯ ಅಷ್ಟೆ, ಬಾಯ್‌ಫ್ರೆಂಡ್‌ ಗೆರೆ ಎಳ್ದಿದ್‌ ಅವ್ಳ್ಗೆ ಬ್ರೇಕಪ್‌ಗೆ ದಾರಿ ಮಾಡ್ತು..

ಇವೆಲ್ಲಾ ಸಣ್ಣ ಪುಟ್ಟ ಎಕ್ಸಾಂಪಲ್ಸ್‌ ಅಷ್ಟೇ, ಬೆಳಗ್ಗೆ ಬಸ್‌ ಅಲ್‌ ಕಂಡಕ್ಟರ್‌ ಒಂದ್‌ ರೂಪಾಯ್‌ಗೆ ಎಷ್ಟ್‌ ಕಿತ್ತಾಡ್ತ್ಯ ಹೋಗಮ್ಮ ಅಂತ ಕೂಗಿದ್ದು, ನೀವ್‌ ಸರಿಯಾಗ್‌ ಡ್ರೈವಿಂಗ್‌ ಮಾಡ್ತಿದ್ರೂ ಪಕ್ಕದ್‌ ಕಾರ್‌ ಅವ್ನ್‌ ಗುದ್ದಕ್‌ ಬಂದ್‌ ಇರಿಟೇಟ್‌ ಮಾಡಿದ್ದು? ಎಷ್ಟು ಅಫೆಕ್ಟ್‌ ಆಗುತ್ತದೆ ಅಲ್ವಾ?

Anime Guys with Glasses Laugh GIFಪ್ರತೀ ದಿನ ಇಂಥ ಸಾವ್ರಾರು ಬಂದು ನಿಮ್ಮ ಮೂಡ್‌ ಹಾಳಾಗಬಹುದು, ನಿಮ್ಮ ದಿನ ಪ್ರೊಡಕ್ಟೀವ್‌ ಆಗದೇ ಇರಬಹುದು. ಇಂಥ ಜನರು ನಿಮ್ಮ ಸುತ್ತ ಮುತ್ತ ಸಾಯೋವರೆಗೂ ಇರುತ್ತಾರೆ. ಅವರ ಮಾತಿಗೆ ಬೆಲೆ ಹಾಕಿದಷ್ಟು ಹೆಚ್ಚಿಕೊಳ್ತಾರೆ. ಕ್ಯಾರೆ ಅನ್ನದಿದ್ರೆ ಸುಮ್ಮನಾಗ್ತಾರೆ. ಇಂಥವರ ಕಮೆಂಟ್‌ ಬಗ್ಗೆ ತಲೆ ಕೆಡಿಸಿಕೊಳ್ಳದಕ್ಕೆ ಈ ಫಾರ್ಮುಲಾ ಉಪಯೋಗಿಸಿ..

ನೀವೇ ಬೆಸ್ಟ್‌, ನಿಮ್ಮಂತೆ ಯಾರೂ ಇಲ್ಲ. ಸೆಲ್ಫ್‌ ರೆಸ್ಪೆಕ್ಟ್‌ ಇಟ್ಟುಕೊಳ್ಳಿ. ಆದರೆ ಈಗೋ ಆಗದಿರಲಿ.

Why Self-Respect is Important? 5 Ways to Have Self-Respect For Yourselfಯಾರಾದ್ರೂ ನೆಗೆಟಿವ್‌ ಕಮೆಂಟ್‌ ಮಾಡಿದಾಗ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಸ್ಮೈಲ್‌ ಮಾಡ್ತಾ ಆರ್‌ ಯು ಒಕೆ? ಎಂದು ಕೇಳಿ. ಅವರೇನೂ ರಿಯಾಕ್ಟ್‌ ಮಾಡೋದಿಲ್ಲ, Just Let It Go

frozen let it go GIF by Walt Disney Animation Studiosಸಾಧ್ಯ ಆದರೆ ನಿಮ್ಮ ಜೀವನದಿಂದ ಅಂಥವರನ್ನು ಕಟ್‌ ಆಫ್‌ ಮಾಡಿಬಿಡಿ.

Stay Away From Negative People - They Have A Problem For Every Solutionನಿಮ್ಮಂತೆ ನೂರಾರು ಜನ ದಿನವೂ ಇಂಥದ್ದನ್ನು ಅನುಭವಿಸ್ತಾರೆ. ಅವರ ಜೊತೆ ಕೂತು ಮಾತನಾಡಿ, ಮನಸ್ಸು ಹಗುರಾಗುತ್ತದೆ.

4 tips for talking to people you disagree with |ನೀವೇನು ಅನ್ನೋದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಸ್ಟ್ರೆಂಥ್‌ ಮೇಲೆ ಗಮನ ಇಡಿ, ಕಾನ್ಫಿಡೆನ್ಸ್‌ ಇರುವ ಜನರ ಬಳಿ ಯಾರೂ ಗೇಲಿ ಮಾಡೋದಕ್ಕೆ ಬರೋದಿಲ್ಲ.

Understand Yourself before anything else - Thrive Globalಎಷ್ಟಾದ್ರೂ ಪ್ರವೋಕ್‌ ಮಾಡಲಿ, ನಿಮ್ಮ ತಾಳ್ಮೆ ಕಳೆದುಕೊಳ್ಳಬೇಡಿ. ಆ ಜಾಗದಿಂದ ಎದ್ದು ಹೋಗೋದು ಬೆಸ್ಟ್.‌ ನೆಗೆಟಿವ್‌ ಭಾವನೆಗಳನ್ನು ದೇಹದೊಳಗೆ ಇನ್ವೈಟ್‌ ಮಾಡ್ಬೇಡಿ.

Slow-mo Walking Away From Explosion GIF | GIFDB.comಜನರ ಕಮೆಂಟ್‌ಗಳಿಂದ ನಿಮ್ಮ ದಾರಿ ಬದಲಾಗೋದು ಬೇಡ, ನಿಮ್ಮ ದಾರಿ ಸರಿ ಇರೋದಕ್ಕೆ ಅವರು ದಾರಿ ತಪ್ಪಿಸ್ತಿರ್ತಾರೆ.

Right Track Road Street Words Best Stock Footage Video (100% Royalty-free) 23357779 | Shutterstockಎಲ್ಲರ ರಿಯಾಲಿಟಿ ಇದೇ ಎಂದು ನಾವು ಹೇಳೋದಿಲ್ಲ. ಕೆಲವೊಮ್ಮೆ ಪ್ರೀತಿಪಾತ್ರರೇ ನಮ್ಮನ್ನು ಹರ್ಟ್‌ ಮಾಡಿಬಿಡುತ್ತಾರೆ. ಅವರಿಂದ ದೂರ ಹೋಗೋಕೆ ಸಾಧ್ಯವಿಲ್ಲ. ಕೂತು ಬಗೆಹರಿಸಿ, ಆ ಕ್ಷಣಕ್ಕೆ ಅಲ್ಲದಿದ್ರೂ ನಿಧಾನಕ್ಕಾದ್ರೂ ಅವರ ತಪ್ಪೇನೆಂದು ವಿವರಿಸಿ, ನಿಮ್ಮ ಮೇಲೆ ಪ್ರೀತಿ ಇದ್ದರೆ ಮತ್ತೆ ಅವರು ಹಾಗೇ ಮಾಡೋದಿಲ್ಲ. ಅಲ್ವಾ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

LEAVE A REPLY

Please enter your comment!
Please enter your name here

error: Content is protected !!