ಜನತೆಯ ಆಕ್ಷೇಪಕ್ಕೆ ಮಣಿದು ಸರ್ಕಾರದ ಯೂ ಟರ್ನ್: ನೇಪಾಳಕ್ಕೆ ರೀ ಎಂಟ್ರಿ ನೀಡಿದ ಟಿಕ್‌ಟಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳಕ್ಕೆ ಟಿಕ್‌ಟಾಕ್ ರೀ ಎಂಟ್ರಿ ನೀಡಿದೆ!
ಸಮಾಜದಲ್ಲಿನ ಸೌಹಾರ್ದವನ್ನು ಹಾಳುಗೆಡುವುತ್ತದೆ ಎನ್ನುವ ಕಾರಣ ನೀಡಿ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ನೇಪಾಳ ಸರ್ಕಾರ ಟಿಕ್‌ಟಾಕ್ ಮೇಲೆ ನಿಷೇಧ ಹೇರಿತ್ತು.

ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಜೊತೆಗೆ ಆ.22ರಂದು ನಡೆದಿದ್ದ ಸಂಪುಟ ಸಭೆಯಲ್ಲಿ ಕೂಡಾ ಇದು ಭಾರೀ ಚರ್ಚೆಗೆ ಕಾರಣವಾಗಿತ್ತಲ್ಲದೆ ನಿಷೇಧವನ್ನು ಹಿಂಪಡೆಯಬೇಕು ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಇದೀಗ ದೂರಸಂಪರ್ಕ ಸಚಿವಾಲಯ ನಿಷೇಧ ತೆರವು ಮಾಡಿ ಅಧಿಕೃತ ಸೂಚನೆ ಹೊರಹಾಕಿದೆ. ನೇಪಾಳಿಗರ ಮೊಬೈಲ್‌ಗಳಲ್ಲಿ ಟಿಕ್‌ಟಾಕ್ ಮತ್ತೆ ಸದ್ದುಮಾಡಲಿದೆ!

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!