ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಕಾಟ್‌ಲ್ಯಾಂಡ್‌ನ ಬಂದರು ನಗರಿ ಗ್ಲಾಸ್ಗೋದಲ್ಲಿ ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ 2026 ನಡೆಯಲಿದೆ. ನಾಳೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ಪಂದ್ಯ ಆಗಸ್ಟ್ ಎರಡಕ್ಕೆ ಮುಕ್ತಾಯವಾಗಲಿದೆ.
ಕಾಮನ್‌ವೆಲ್ತ್ ರಾಷ್ಟ್ರಗಳ ಸುಮಾರು 3 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು 10 ಪ್ರಮುಖ ಕ್ರೀಡೆಗಳ 215 ವಿಭಾಗಗಳಲ್ಲಿ ಸೆಣಸಾಡಲಿದ್ದಾರೆ. ಭಾರತಕ್ಕೆ ಹೆಚ್ಚು ಪದಕಗಳನ್ನು ತರುತ್ತಿದ್ದ ಕ್ರೀಡೆಗಳನ್ನು ಈ ಬಾರಿ ಪಟ್ಟಿಯಿಂದ ತೆಗೆಯಲಾಗಿದೆ. ಕೇವಲ ಹತ್ತು ಪ್ರಮುಖ ಕ್ರೀಡೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ 126 ಅಥ್ಲೀಟ್‌ಗಳನ್ನೊಳಗೊಂಡ ಬಲವಾದ ಭಾರತೀಯ ಪಡೆ ಪದಕಕ್ಕಾಗಿ ಹೋರಾಟ ನಡೆಸಲಿದೆ.
ಈ ಬಾರಿ ನೀರಜ್ ಚೋಪ್ರಾ, ಮೀರಾಬಾಯಿ ಚಾನು, ಲವ್ಲಿನಾ ಬೋರ್ಗೋಹೈನ್ ಹಾಗೂ ಮರಳಿ ಶ್ರೀಶಂಕರ್ ಪದಕ ತರುವ ಭರವಸೆ ಇದೆ.ಆಯೋಜಕರ ಬಜೆಟ್ ಕೊರತೆಯಿಂದಾಗಿ ಈ ಬಾರಿ ಪಂದ್ಯಾವಳಿಯ ವೆಚ್ಚವನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ಪರಿಣಾಮವಾಗಿ, 2022ರ ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಲ್ಲಿ ಭಾರತಕ್ಕೆ ಬರಪೂರ ಪದಕ ತಂದುಕೊಟ್ಟಿದ್ದ ಪ್ರಮುಖ ಕ್ರೀಡೆಗಳನ್ನೇ ಕೈಬಿಡಲಾಗಿದೆ. ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಟೇಬಲ್ ಟೆನಿಸ್ ಆಟಗಳನ್ನು ಕೈಬಿಡಲಾಗಿದೆ.



