October 8, 2026
Thursday, October 8, 2026
spot_img

ಗ್ಲ್ಯಾಸ್ಗೋ ಗೇಮ್ಸ್ 2026: ಬಾಕ್ಸಿಂಗ್ ಫೈನಲ್‌ನಲ್ಲಿ ಕೆನಡಾ ಬಾಕ್ಸರ್ ವಿರುದ್ಧ ಪ್ರೀತಿ ಪನ್ವಾರ್‌ಗೆ ಭರ್ಜರಿ ಜಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದ ಹತ್ತನೇ ದಿನ ಭಾರತಕ್ಕೆ ಶುಭಾರಂಭ ಸಿಕ್ಕಿದೆ. ಮಹಿಳೆಯರ 54 ಕೆಜಿ ಬಾಕ್ಸಿಂಗ್ ವಿಭಾಗದ ಫೈನಲ್‌ನಲ್ಲಿ 22 ವರ್ಷದ ಪ್ರೀತಿ ಪನ್ವಾರ್ ಕೆನಡಾದ ಸ್ಕಾರ್ಲೆಟ್ ಡೆಲ್ಗಾಡೊ ಅವರನ್ನು 5-0 ಅಂತರದಿಂದ ಸಂಪೂರ್ಣವಾಗಿ ಧೂಳಿಪಟ ಮಾಡಿ ಬಂಗಾರದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಪ್ರಸ್ತುತ ಏಷ್ಯನ್ ಚಾಂಪಿಯನ್ ಆಗಿರುವ ಪ್ರೀತಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇದು ಮೊದಲ ಪದಕವಾಗಿದ್ದು, ಈ ಮೂಲಕ ಭಾರತಕ್ಕೆ ಐತಿಹಾಸಿಕ ಕೊಡುಗೆ ನೀಡಿದ್ದಾರೆ.

ಪ್ರೀತಿಯ ಚಿನ್ನದ ಹಾದಿ

ರಿಂಗ್‌ನಲ್ಲಿ ಪ್ರೀತಿ ಅವರ ಜಯದ ಪಯಣ ಅತ್ಯಂತ ರೋಚಕವಾಗಿತ್ತು. 16ರ ಸುತ್ತಿನಲ್ಲಿ ಡೆಬೊರಾ ಮಾಟೆಂಜೆ, ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ಐರ್ಲೆಂಡ್‌ನ ನಿಕೋಲ್ ಕ್ಲೈಡ್ ಹಾಗೂ ಸೆಮಿಫೈನಲ್‌ನಲ್ಲಿ ಜಾಂಬಿಯಾದ ಕ್ಯಾಥರೀನ್ ಮ್ವಾಪೆ ಅವರನ್ನು ಸುಲಭವಾಗಿ ಮಣಿಸಿ ಫೈನಲ್ ತಲುಪಿದ್ದರು.

ಸಾಧನೆಗೆ ಪ್ರೇರಣೆಯಾದ ಕುಟುಂಬ

ಹರಿಯಾಣ ಪೊಲೀಸ್ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಹಾಗೂ ಮಾಜಿ ಕಬಡ್ಡಿ ಆಟಗಾರ ಸೋಮವೀರ್ ಮತ್ತು ಮಾಜಿ ಕ್ರೀಡಾಪಟು ಶಾಮಿನಿ ದೇವಿ ದಂಪತಿಯ ಪುತ್ರಿಯಾದ ಪ್ರೀತಿಗೆ ಕ್ರೀಡೆಯಲ್ಲಿ ಎತ್ತರಕ್ಕೇರಲು ಕುಟುಂಬವೇ ದೊಡ್ಡ ಶಕ್ತಿಯಾಗಿದೆ. ‘ದಂಗಲ್’ ಚಲನಚಿತ್ರ ಹಾಗೂ ಸಾಕ್ಷಿ ಮಲ್ಲಿಕ್ ಅವರ ಒಲಿಂಪಿಕ್ ಪದಕದ ಸಾಧನೆಯು ಪ್ರೀತಿ ಅವರನ್ನು ಬಾಕ್ಸಿಂಗ್ ಕ್ಷೇತ್ರದಲ್ಲಿ ಬೆಳೆಯಲು ಪ್ರೇರೇಪಿಸಿತು.

Must Read