Thursday, June 30, 2022

Latest Posts

ಭಾರತೀಯ ಸಂಪ್ರದಾಯದಂತೆ ಹಸಮಣೆ ಏರಿದ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ವೆಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್

ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ತಮ್ಮ ದೀರ್ಘಕಾಲದ ಗೆಳತಿ ವಿನಿ ರಾಮನ್ ಅವರನ್ನು ಭಾರತೀಯ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಈ ಕುರಿತು ವಿನಿ ರಾಮನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅದರ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಈ ಜೋಡಿ ಭಾನುವಾರ (ಮಾರ್ಚ್ 27) ಭಾರತೀಯ ಶೈಲಿಯಲ್ಲಿ ಸಂಪ್ರದಾಯದಲ್ಲಿ ವಿವಾಹವಾದರು.ಸದ್ಯ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ನೂತನ ಜೋಡಿಗೆ ಶುಭಹಾರೈಸಿದ್ದಾರೆ.
ಇನ್ನು ಈ ಕುರಿತು ವೀಡಿಯೊದಲ್ಲಿ, ಇಬ್ಬರೂ ಭಾರತೀಯ ಸಾಂಪ್ರದಾಯಿಕ ವಿವಾಹದಲ್ಲಿ ಪರಸ್ಪರ ಹೂಮಾಲೆಗಳನ್ನು ಹಾಕುವುದನ್ನು ಕಾಣಬಹುದು. ಇದು ಹಿನ್ನೆಲೆಯಲ್ಲಿ ತಮಿಳು ಬ್ರಾಹ್ಮಣರು ನುಡಿಸಿದ ವಿವಾಹ ಸಂಗೀತವನ್ನ ಕೇಳಬಹುದು. ಮ್ಯಾಕ್ಸ್ವೆಲ್ ಶೆರ್ವಾನಿಯಲ್ಲಿದ್ದು, ವಿನಿ ಸಾಂಪ್ರದಾಯಿಕ ಭಾರತೀಯ ಸೀರೆಯಲ್ಲಿ ಮಿಂಚಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss