ಜಾಗತಿಕ ಉದ್ಯೋಗ ಕಡಿತ: 2023ರಲ್ಲಿ ದಿನಕ್ಕೆ 2,093 ಟೆಕ್ ಉದ್ಯೋಗಿಗಳು ಪಡೆಯುತ್ತಿದ್ದಾರೆ ಪಿಂಕ್‌ ಸ್ಲಿಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆರ್ಥಿಕ ಹಿಂಜರಿತದ ಭೀತಿಯಿಂದ ಜಾಗತಿಕವಾಗಿ ಉದ್ಯೊಗ ಕಡಿತಗಳು ಮುಂದುವರೆದಿದ್ದು ದಿನಂ ಪ್ರತಿ ಎರಡು ಸಾವಿರದಷ್ಟು ಉದ್ಯೋಗಿಗಳು ತಮ್ಮ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ದತ್ತಾಂಶ ವರದಿಯೊಂದು ಬಹಿರಂಗ ಪಡಿಸಿದೆ. layofss.fyi ಎಂಬ ವೆಬ್ಸೈಟ್‌ ನಲ್ಲಿಯ ಮಾಹಿತಿಯ ಪ್ರಕಾರ 2023ರಲ್ಲಿ ಪ್ರತಿದಿನ ಬರೋಬ್ಬರಿ 2,093ರಷ್ಟು ಮಂದಿ ಉದ್ಯೋಗ ವಂಚಿತರಾಗುತ್ತಿದ್ದಾರೆ.

2023ನೇ ವರ್ಷದ ಎರಡನೇ ತಿಂಗಳು ಅಂದರೆ ಫೆಬ್ರವರಿಯ ವರೆಗೆ ಬರೋಬ್ಬರಿ 1,08,854 ಮಂದಿ ಕಂಪನಿಗಳಿಂದ ಹೊರಹಾಕಲ್ಪಟ್ಟಿದ್ದಾರೆ. ಇದು ಕೇವಲ 2023ರ ಅಂಕಿ ಅಂಶವಾದರೆ 20222ರ ಕೊನೆಯಲ್ಲಿ ಆರಂಭವಾದ ಉದ್ಯೋಗಕಡಿತದ ಪರಿಣಾಮ 1.6 ಲಕ್ಷದಷ್ಟು ಉದ್ಯೋಗಿಗಳು ಮನೆಗೆ ಕಳುಹಿಸಲ್ಪಟ್ಟಿದ್ದಾರೆ.

ಉದ್ಯೋಗ ಕಡಿತದಲ್ಲಿ ಜಾಗತಿಕವಾಗಿ ಟಾಪ್‌ ಲಿಸ್ಟ್ನಲಿರುವ ಅಮೆರಿಕ ಮೂಲದ ಕಂಪನಿಗಳಾದ ಗೂಗಲ್‌, ಮೆಟಾ,ಅಮೇಜಾನ್‌, ಮೈಕ್ರೋಸಾಫ್ಟ್‌ ಕಂಪನಿಗಳು ಹೆಚ್ಚಿನ ಪಾಲು ಪಡೆದಿವೆ. 2023ರಲ್ಲಿ ಸಂಭವಿಸಿದ ಉದ್ಯೋಗಕಡಿತದಲ್ಲಿ ಈ ನಾಲ್ಕು ಕಂಪನಿಗಳು ಸಿಂಹಪಾಲು ಹೊಂದಿದ್ದು 43,000 ಅಂದರೆ ಇಲ್ಲಿಯವರೆಗಿನ ಒಟ್ಟಾರೆ ಉದ್ಯೋಗಕಡಿತದಲ್ಲಿ 40 ಶೇಕಡಾದಷ್ಟು ಈ ಕಂಪನಿಗಳಿಂದಲೇ ನಡೆದಿದೆ. ನಾಲ್ಕರಲ್ಲಿ ಮೂರು ಉದ್ಯೋಗಿಗಳು ಟಾಪ್‌ 10 ಕಂಪನಿಗಳಿಂದಲೇ ಹೊರತಳ್ಳಲ್ಪಟ್ಟಿದ್ದಾರೆ. ಒಟ್ಟಾರೆ 80,125 ಹೊರಹಾಕಲ್ಪಟ್ಟ ಉದ್ಯೋಗಿಗಳು ಟಾಪ್‌ 10 ಕಂಪನಿಗಳಲ್ಲಿ ಕೆಲಸದಲ್ಲಿದ್ದರು ಎಂದು ಅಂಕಿಅಂಶಗಳು ತೋರಿಸಿವೆ.

2023ರಲ್ಲಿ ಪಿಂಕ್‌ ಸ್ಲಿಪ್‌ ಪಡೆದ1.09 ಲಕ್ಷ ಉದ್ಯೋಗಿಗಳಲ್ಲಿ 13,339 ಭಾರತೀಯ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಭಾರತದಲ್ಲಿನ ಉದ್ಯೋಗಕಡಿತದಲ್ಲಿ ವೈಟ್‌ಹ್ಯಾಟ್‌, ಬೈಟ್‌ಡಾನ್ಸ್‌, ಪೈಸಾಬಝಾರ್‌, ಒಯೋ ಮತ್ತು ಕಾರ್ಸ್24‌ ಈ ಐದು ಕಂಪನಿಗಳು ಅರ್ಧದಷ್ಟು ಪಾಲುಹೊಂದಿದ್ದು 7,200 ಉದ್ಯೋಗಿಗಳನ್ನು ಹೊರಹಾಕಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!