ಹೊಸದಿಗಂತ ವರದಿ,ಮಂಡ್ಯ :
ಡಿಸೆಂಬರ್ 20, 21, 22 ರಂದು ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ 94 ವರ್ಷದ ಗೊ.ರೂ. ಚನ್ನಬಸಪ್ಪ ಅವವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗೊ.ರೂ. ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಕಾರ‌್ಯಕಾರಿ ಸಮಿತಿ ಸಭೆಯ ನಂತರ ಈ ವಿಷಯವನ್ನು ಡಾ. ಮಹೇಶ್ ಜೋಶಿ ಅವರು ದೂರವಣಿ ಮೂಲಕ ಗೊ.ರೂ.ಚ ಅವರಿಗೆ ವಿಚಾರ ತಿಳಿಸಿ ಅಭಿನಂದಿಸಿದರು. ಆಯ್ಕೆ ವಿಷಯ ತಿಳಿದ ಅತ್ಯಂತ ಸಂತೋಷದಿಂದ ಒಪ್ಪಿಗೆ ಸೂಚಿಸಿದರು.